ಉಡುಪಿ : ದ್ವಿಚಕ್ರ ವಾಹನ ಅಪಘಾತ ಪಾದಚಾರಿ ಸ್ಥಿತಿ ಗಂಭೀರ - Mahanayaka

ಉಡುಪಿ : ದ್ವಿಚಕ್ರ ವಾಹನ ಅಪಘಾತ ಪಾದಚಾರಿ ಸ್ಥಿತಿ ಗಂಭೀರ

acident
01/09/2023

ಉಡುಪಿ: ನಗರದ ಹಳೆ ತಾಲೂಕು ಕಚೇರಿಯ ಹತ್ತಿರ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಕಚೇರಿಯ ಮುಂಬಾಗ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣci ಒಳಕಾಡು ಅವರು ಸ್ಥಳಕ್ಕೆ ಬಂದು ಇಬ್ಬರು ಗಾಯಾಳುಗಳನ್ನು ರಕ್ಷಿಸಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.

ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಹರಿಯಪ್ಪ (50 ವರ್ಷ) ಬೆಂಗಳೂರು ನಿವಾಸಿ ಎಂದು ತಿಳಿದುಬಂದಿದೆ. ಅಪಘಾತದಿಂದ ಹರಿಯಪ್ಪ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಗಾಯಗೊಂಡಿರುವ ಇನ್ನೋರ್ವನನ್ನು ಅಂಬಿಕಾ ಯಾದವ್ ಕರ್ಗಿ ಎಂದು ಗುರುತಿಸಲಾಗಿದೆ. ಸಂಬಂಧಿಕರು ಕೂಡಲೇ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿ