ಯುಎಇನಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಔತಣಕೂಟ: ನಮೋಗಾಗಿ ರೆಡಿ ಮಾಡಲಾಗಿತ್ತು ಸಸ್ಯಾಹಾರದ ಸ್ಪೆಷಲ್ ಅಡುಗೆ..! - Mahanayaka

ಯುಎಇನಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಔತಣಕೂಟ: ನಮೋಗಾಗಿ ರೆಡಿ ಮಾಡಲಾಗಿತ್ತು ಸಸ್ಯಾಹಾರದ ಸ್ಪೆಷಲ್ ಅಡುಗೆ..!

15/07/2023


Provided by

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಒಂದು ದಿನದ ಭೇಟಿಗಾಗಿ ಅಬುಧಾಬಿಗೆ ಭೇಟಿ ನೀಡಿದ್ದಾರೆ. ಇವರಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಔತಣಕೂಟ ಏರ್ಪಡಿಸಿದ್ದರು. ವಿಶೇಷ ಅಂದ್ರೆ ಈ ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿತ್ತು.

ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಲಾಗಿದೆ ಹಾಗೂ ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿತ್ತು.
ಯುಎಇ ಅಧ್ಯಕ್ಷರ ಅರಮನೆಯಾದ ಕಸ್ರ್-ಅಲ್-ವತನ್ ನಲ್ಲಿ ನಡೆದ ಔತಣಕೂಟದಲ್ಲಿ ಮೊದಲಿಗೆ ಗೋಧಿ ಮತ್ತು ಖರ್ಜೂರದ ಜತೆ ಸ್ಥಳೀಯ ಸಾವಯವ ತರಕಾರಿಗಳ ಸಲಾಡ್ ಬಡಿಸಲಾಗಿದೆ.

ನಂತರ ಮಸಾಲಾ ಸಾಸ್‌ನೊಂದಿಗೆ ಗ್ರಿಲ್ಡ್ ತರಕಾರಿಗಳನ್ನು ನೀಡಲಾಯಿತು. ಇದಾದ ಮೇಲೆ ಹೂಕೋಸು ಮತ್ತು ಕ್ಯಾರೆಟ್ ತಂದೂರಿಯೊಂದಿಗೆ ಕಪ್ಪು ಉದ್ದಿನ ಬೇಳೆ ಮತ್ತು ಸ್ಥಳೀಯ ಗೋಧಿಯಿಂದ ಮಾಡಿದ ಭಕ್ಷ್ಯ ನೀಡಲಾಗಿದೆ. ಸಿಹಿತಿಂಡಿಗಳಿಗಾಗಿ ವಿವಿಧ ಹಣ್ಣುಗಳನ್ನು ನೀಡಲಾಯಿತು.

ಇದೇ ವೇಳೆ ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, ‘ನೀವು ನನಗೆ ನೀಡಿದ ಗೌರವ, ಸಹೋದರನೊಬ್ಬ ತನ್ನ ಸಹೋದರನನ್ನು ಭೇಟಿ ಮಾಡಿದಂತೆಯೇ. ಇದಕ್ಕಿಂತ ಬಾಂಧವ್ಯಕ್ಕೆ ಇನ್ನೊಂದು ಪುರಾವೆ ಇಲ್ಲ” ಎಂದು ಹೇಳಿದರು.

ಯುಎಇಯಲ್ಲಿ ನಡೆಯಲಿರುವ COP-28 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ ಪ್ರಧಾನಿ, ನಾವು (ಭಾರತ-ಯುಎಇ) ಮೂರು ತಿಂಗಳೊಳಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ಅದು ನಿಮ್ಮ ಸಹಕಾರ ಮತ್ತು ಬದ್ಧತೆಯಿಲ್ಲದೆ ಸಾಧ್ಯವಿಲ್ಲ’ ಎಂದಿದ್ದಾರೆ.

ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರವು 20 ಪ್ರತಿಶತದಷ್ಟು ಬೆಳೆದಿದೆ. ಈ ಎರಡೂ ದೇಶಗಳು $ 85 ಬಿಲಿಯನ್ ವ್ಯಾಪಾರವನ್ನು ಸಾಧಿಸಿವೆ. ನಾವು ಶೀಘ್ರದಲ್ಲೇ 100 ಬಿಲಿಯನ್ ಗುರಿಯನ್ನು ಸಾಧಿಸುತ್ತೇವೆ ಎಂದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ