ಉಡ ಬೇಟೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಸಕಲೇಶಪುರ: ವಲಯ, ಮಾರನಹಳ್ಳಿ ಶಾಖೆಯ ಕಾಡುಮನೆ ಎಸ್ಟೇಟ್ ಸರ್ವೆ ನಂಬರ್–02 ರ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಗಸ್ತು ತಿರುಗುವಾಗ ಅಕ್ರಮವಾಗಿ ಉಡವನ್ನು ಬೇಟೆಯಾಡಿ ಮಾಂಸವನ್ನಾಗಿ ಪರ್ವರ್ತಿಸುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳಾದ ಬಾಬು P A s/o ಎಲಿಯಾಸ್ P V (ಶಿರಾಡಿ ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ) & ಬಿನೋಯಿ s/o ಪ್ರಭಾಕರ್ (ಉಪ್ಸ್ಕೋಡು, ಇಡುಕ್ಕಿ ತಾಲೂಕು ಕೇರಳ) ಹಾಗೂ ಸಿಂಗಲ್ ಬ್ಯಾರೆಲ್ ಗನ್ ಅನ್ನು ಇಲಾಖೆ ಪರ ವಶಮಾಡಿಸಿಕೊಂಡು ಅರಣ್ಯ ಪ್ರಕರಣ ಹಾಕಲಾಯಿತು.
ಇನ್ನುಳಿದ ಐದು ಆರೋಪಿಗಳಾದ ಜೋಶ್(ಶಿರಾಡಿ ಗ್ರಾಮ), ಜೇಮ್ಸ್(ಉದಾನೆ), ಅಭಿಲಾಷ್(ಶಿರಾಡಿ), ಪ್ರದೀಪ್(ಉದಾನೆ), ಬಾಬುಟ (ಎಂಜಿರ) ಇವರು ತಲೆಮರೆಸಿಕೊಂಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ಎಚ್.ಆರ್.ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ಅರ್ಜುನ್ ಎಸ್ ಆರ್, ಗಸ್ತು ಅರಣ್ಯ ಪಾಲಕರದ ಉಮೇಶ್ ಎಸ್,ದೇವರಾಜು ಅರಣ್ಯ ವೀಕ್ಷಕರಾದ ಲೋಕೇಶ್ ಬಿ.ಎಂ., RRT ಅರಣ್ಯ ಸಿಬ್ಬಂದಿಗಳಾದ ಕರುಣಾಕರ ಕೆ.ಎಸ್., ಹೇಮಂತ್ ಕುಮಾರ್, ದಿವಾಕರ ಜಿ.ವಿ., ನಿಕ್ಷಿತ್ ಹೆಚ್ ಡಿ ಹಾಗೂ ಚಾಲಕ ಆಶ್ರಯ್ ಭಾಗಿಯಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























