ಉಡುಪಿ: ನಾಲ್ವರ ಹತ್ಯೆಯನ್ನು ಸಂಭ್ರಮಿಸಿ ಇನ್ಸ್‌ ಸ್ಟಾಗ್ರಾಮ್ ನಲ್ಲಿ ಪೋಸ್ಟ್ - Mahanayaka

ಉಡುಪಿ: ನಾಲ್ವರ ಹತ್ಯೆಯನ್ನು ಸಂಭ್ರಮಿಸಿ ಇನ್ಸ್‌ ಸ್ಟಾಗ್ರಾಮ್ ನಲ್ಲಿ ಪೋಸ್ಟ್

hindu manthra
17/11/2023


Provided by

ಉಡುಪಿ: ಉಡುಪಿಯ ನೇಜಾರಿನ ತೃಪ್ತಿ ಲೇಔಟ್‌ ನಲ್ಲಿ ನಾಲ್ವರ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬಾಳಿ ಬದುಕಬೇಕಿದ್ದ ಯುವತಿಯರು, ಮುಗ್ಧ ಬಾಲಕನ ಸಾವಿನಿಂದ ಚೇತರಿಸಿಕೊಳ್ಳಲು ಆ ಕುಟುಂಬಕ್ಕೆ ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ, ಆದರೆ ಇಂತಹ ದುಃಖದ ಘಟನೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಹತ್ಯೆಯನ್ನು ಸಂಭ್ರಮಿಸಿದ ಘಟನೆ ನಡೆದಿದೆ.

ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆಯ ಫೋಟೋಗೆ ಕಿರೀಟ ತೊಡಿಸಿದಂತೆ ಎಡಿಟ್‌ ಮಾಡಿ “15 ನಿಮಿಷದಲ್ಲಿ  ನಾಲ್ಕು ಮುಸ್ಲಿಮರ ಕೊಲೆ ಮಾಡಿರೋದು ವರ್ಲ್ಡ್‌ ರೆಕಾರ್ಡ್‌” ಎಂದು “ಹಿಂದೂ ಮಂತ್ರ” ಎಂಬ ಇನ್ಸ್‌ ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಹಾಕಲಾಗಿದೆ.

ಸದ್ಯ ಈ ಪೋಸ್ಟ್‌ ಶೇರ್‌ ಮಾಡಿದವರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಸ್‌ ದಾಖಲಾಗುತ್ತಿದ್ದಂತೆಯೇ ಹಿಂದೂ ಮಂತ್ರ ಅಕೌಂಟ್‌ ನಿಂದ ಪೋಸ್ಟ್‌ ತೆಗೆದು ಹಾಕಲಾಗಿದೆ. ಆದ್ರೆ ಈ ಪೋಸ್ಟ್‌ ನ ಸ್ಕ್ರೀನ್‌ ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಮ್ಮ ಕೃತ್ಯಕ್ಕೂ ಸಮರ್ಥನೆ ನೀಡಿರುವ ಕಿಡಿಗೇಡಿಗಳು ‘ಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ. ಆದ್ದರಿಂದ, ನಾವೂ ಈ ವಿಚಾರಕ್ಕೆ ಬರುವುದಿಲ್ಲ’ ಎಂದು ಬರೆಯಲಾಗಿದೆ.

 

ಇತ್ತೀಚಿನ ಸುದ್ದಿ