ಉಡುಪಿಯಲ್ಲಿ ಐಸಿಯು ಬೆಡ್ ಗಳಿಲ್ಲ | ಜಿಲ್ಲಾಧಿಕಾರಿ ಜಗದೀಶ್ - Mahanayaka
6:14 AM Saturday 18 - October 2025

ಉಡುಪಿಯಲ್ಲಿ ಐಸಿಯು ಬೆಡ್ ಗಳಿಲ್ಲ | ಜಿಲ್ಲಾಧಿಕಾರಿ ಜಗದೀಶ್

udupi dc jagadeesh
04/05/2021

ಉಡುಪಿ:  ಉಡುಪಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳಿಲ್ಲ ಎನ್ನುವ ವಿಚಾರವನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದ್ದು, ಐಸಿಯು ಬೆಡ್ ಗಳು  ತುಂಬಿವೆ ಎಂದು ಅವರು ತಿಳಿಸಿದ್ದಾರೆ.


Provided by

ಈ ಬಗ್ಗೆ ಮಾತನಾಡಿರುವ ಅವರು,  ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಿದ್ದು, ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಹೊರಗಿನಿಂದ ಬರುವವರನ್ನು ಮನೆಗೆ ಸೇರಿಸುವುದನ್ನು ಆದಷ್ಟು ಕಡಿಮೆ ಮಾಡಿ. ಅವರನ್ನು ಕೆಲವು ದಿನ ಐಸೋಲೇಶನ್ ಮಾಡಿ ಎಂದ ಅವರು,  ಕೊರೊನಾ ಲಕ್ಷಣಗಳು ಕಂಡು ಬಂದರೂ  ಜನರು ಟೆಸ್ಟ್ ಮಾಡಿಸುತ್ತಿಲ್ಲ.  ಗಂಭೀರವಾದ ಬಳಿಕ ಐಸಿಯುಗೆ ಬರುತ್ತಿದ್ದಾರೆ. ಆದರೆ ಈಗಾಗಲೇ ಐಸಿಯು ಬೆಡ್ ಗಳು ತುಂಬಿಗೆ ಹಾಗಾಗಿ ಕೊರೊನಾ ಲಕ್ಷಣ ಕಂಡು ಬಂದರೆ ತಕ್ಷಣವೇ ಟೆಸ್ಟ್ ಮಾಡಿಸಿ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ