ಉಡುಪಿಯಲ್ಲಿ ಇಂದಿನಿಂದ 19ರ ವರೆಗೆ ಸೆಕ್ಷನ್ 144 ಜಾರಿ - Mahanayaka
2:00 AM Wednesday 15 - October 2025

ಉಡುಪಿಯಲ್ಲಿ ಇಂದಿನಿಂದ 19ರ ವರೆಗೆ ಸೆಕ್ಷನ್ 144 ಜಾರಿ

udupi
14/02/2022

ಉಡುಪಿ: ಉಡುಪಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತ ಫೆ.14 ರಿಂದ ಫೆ. 19ರ ವರೆಗೆ ಸೆಕ್ಷನ್ 144 ಜಾರಿಗೊಳಿಸಿದೆ.


Provided by

ಉಡುಪಿ ಜಿಲ್ಲಾಡಳಿತದ ಈ ಆದೇಶವು ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆ 6ರವರೆಗೆ ಅನ್ವಯವಾಗಲಿದೆ ಆದೇಶದ ಪ್ರಕಾರ, ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗಳು ಮತ್ತು ರ್‍ಯಾಲಿಗಳಿಗೆ ನಿಷೇಧವಿದೆ. ಘೋಷಣೆಗಳನ್ನು ಕೊಗುವುದು, ಹಾಡುಗಳನ್ನು ಹಾಡುವುದು ಅಥವಾ ಭಾಷಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸೋಮವಾರದಿಂದ ಶಾಲೆಗಳು ಪುನರಾರಂಭವಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೆಕ್ಷನ್ 144 ಜಾರಿಯಾದ ನಂತರ, ಪ್ರತಿಕೃತಿ ದಹನ, ಪಟಾಕಿ ಸುಡುವುದು, ಆಯುಧಗಳು ಮತ್ತು ಕಲ್ಲುಗಳನ್ನು ಒಯ್ಯುವುದು ಅಥವಾ ತೋರುವುದು, ಸಾರ್ವಜನಿಕವಾಗಿ ಸಿಹಿ ಹಂಚುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಅಸಭ್ಯ ವರ್ತನೆಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸುದ್ದಿ ಸಂಸ್ಥೆಯ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಪತ್ರಕರ್ತ

ಸದನದಲ್ಲಿ ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

ಖಾದರ್‌ಗೆ ಮೈಸೂರು ಇತಿಹಾಸ ಗೊತ್ತಿಲ್ಲ: ಸಂಸದ ಪ್ರತಾಪ್‌ ಸಿಂಹ

ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ: ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಇತ್ತೀಚಿನ ಸುದ್ದಿ