ಉದ್ಯಮಿಗೆ ಬ್ಯಾಂಕ್ ಕೆ ವೈ ಸಿ ಹೆಸರಿನಲ್ಲಿ 13 ಲಕ್ಷ ರೂ. ವಂಚನೆ - Mahanayaka
11:21 AM Sunday 7 - September 2025

ಉದ್ಯಮಿಗೆ ಬ್ಯಾಂಕ್ ಕೆ ವೈ ಸಿ ಹೆಸರಿನಲ್ಲಿ 13 ಲಕ್ಷ ರೂ. ವಂಚನೆ

bank-fraud
02/02/2022

ಛತ್ತೀಸ್‌ಗಢ: ಛತ್ತೀಸ್‌ಗಢದ ದಾಂತೇವಾಡದ ಬಾಚೇಲಿ ಪಟ್ಟಣದಲ್ಲಿ ಖ್ಯಾತ ಉದ್ಯಮಿಯೊಬ್ಬರಿಗೆ 13 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.


Provided by

ಪೊಲೀಸರ ಪ್ರಕಾರ, ಠಾಣಾ ಬಾಚೆಲಿ ಪ್ರದೇಶದ ಸ್ಥಳೀಯ ಸ್ಟಾರ್ ಪೆಟ್ರೋಲ್ ಪಂಪ್‌ನ ಮಾಲಕ ಕೀರ್ತಿ ಕುಮಾರ್ ಚಿತಾಲಿಯಾ ಅವರಿಗೆ ಜ. 26ರಂದು ಸಂಜೆ 4 ಗಂಟೆಗೆ ನಕಲಿ ಎಸ್‌ಬಿಐ ಬ್ಯಾಂಕ್‌ನಿಂದ ʻಎಸ್‌ಬಿಐನ ಕೆವೈಸಿ ಅಪ್‌ಡೇಟ್ʼ ಮಾಡಲು ಅಪರಿಚಿತ ಮೊಬೈಲ್ ಸಂಖ್ಯೆಯನ್ನು ಕೇಳುವ ಸಂದೇಶ ಬಂದಿದೆ.

ನಂತರ ಉಳಿತಾಯ ಖಾತೆಯನ್ನು ಸಂಪರ್ಕಿಸಲು ಹೇಳಿದ್ದಾರೆ. ಈ ವೇಳೆ ಅರ್ಜಿದಾರರು ಮೇಲಿನ ಸಂಖ್ಯೆಯನ್ನು ಸಂಪರ್ಕಿಸಿದರು. ನಂತರ ವಂಚಕನು ಕೆವೈಸಿನ್ನು ನವೀಕರಿಸುವ ಹೆಸರಿನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಐಡಿಯನ್ನು ಕೇಳಿದ್ದಾನೆ. ನಂತರ ಒಟಿಪಿ ನಂಬರ್‌ಅನ್ನು ಸಹ ಕೀರ್ತಿ ಚಿತಾಲಿಯಾ ತನ್ನ ಅಜ್ಞಾನದಿಂದ ವಂಚಕನಿಗೆ ನೀಡಿದ್ದಾನೆ. ನಂಬರ್ ಹೇಳಿದ ನಂತರ ದುರುಳರು ಮಾತನಾಡುತ್ತಲೇ ಅಕೌಂಟ್ ಅಪ್ ಡೇಟ್ ಮಾಡುವ ಬಗ್ಗೆ ಮಾತನಾಡಿದ್ದು, ಬಳಿಕ ವ್ಯವಹಾರದ ಮೆಸೇಜ್ ಬರುವುದು ನಿಂತಿದೆ.

ಎರಡನೇ ದಿನವಾದ ಗುರುವಾರ ಬಾಚೇಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಆಗಮಿಸಿ ಖಾತೆಯ ಬಗ್ಗೆ ವಿಚಾರಿಸಿದಾಗ ಸುಮಾರು 3 ದಿನಗಳಲ್ಲಿ ವಿವಿಧ ವಹಿವಾಟುಗಳಲ್ಲಿ 12,75,001 ರೂ. ಡ್ರಾ ಆಗಿರುವುದು ಪತ್ತೆಯಾಗಿದೆ.

ಹೀಗಾಗಿ ಬ್ಯಾಂಕ್ ಖಾತೆಗಳು, ಮೊಬೈಲ್ ಇತ್ಯಾದಿಗಳಲ್ಲಿ ‘ಒಟಿಪಿ’ ಅನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಅಗತ್ಯವಿದ್ದರೆ, ಹಂಚಿಕೊಳ್ಳುವ ಮೊದಲು ಇಂಗ್ಲಿಷ್‌ನಲ್ಲಿರುವ ಸಂದೇಶಗಳನ್ನು ಎಚ್ಚರಿಕೆಯಿಂದ ಓದುವಂತೆ ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿ ಕಚೇರಿಯಲ್ಲೇ ಬಡಿದಾಡಿಕೊಂಡು ಕಾರ್ಯಕರ್ತರು: ಮಾಜಿ ಶಾಸಕ ಸುರೇಶ್​ ಗೌಡರ ಬೆಂಬಲಿಗನ ವಿರುದ್ಧ ದೂರು

ಎರಡು ತಂಡಗಳ ನಡುವೆ ಗಲಾಟೆ: ಮಾರಾಕಾಸ್ತ್ರದೊಂದಿಗೆ ಬಂದ ಯುವಕ

ಫೆ.7ರಿಂದ ಬಜೆಟ್‌ ಪೂರ್ವಭಾವಿ ಸಿದ್ಧತೆ: ಸಿಎಂ ಬಸವರಾಜ ಬೊಮ್ಮಾಯಿ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

ರಾಜ್ಯ ಸರ್ಕಾರ ಮಲಗಿ ಬಿಟ್ಟಿದೆ: ಮಾಜಿ ಸಚಿವ ಸಂತೋಷ್ ಲಾಡ್

 

ಇತ್ತೀಚಿನ ಸುದ್ದಿ