ಟಿವಿ9 ವರದಿ ವಿರುದ್ಧ ಸಾಲು ಮರದ ತಿಮ್ಮಕ್ಕನವರ ಪುತ್ರ ಉಮೇಶ್ ಆಕ್ರೋಶ: ಕಾನೂನು ಕ್ರಮದ ಎಚ್ಚರಿಕೆ - Mahanayaka

ಟಿವಿ9 ವರದಿ ವಿರುದ್ಧ ಸಾಲು ಮರದ ತಿಮ್ಮಕ್ಕನವರ ಪುತ್ರ ಉಮೇಶ್ ಆಕ್ರೋಶ: ಕಾನೂನು ಕ್ರಮದ ಎಚ್ಚರಿಕೆ

salumarada timmakka son umesh
18/09/2023


Provided by

ಚಿಕ್ಕಮಗಳೂರು: ಚೈತ್ರಾ ಕುಂದಾಪುರ  ಡೀಲ್ ಕೇಸ್ ನಲ್ಲಿ ಅನಾವಶ್ಯಕವಾಗಿ ಸಾಲುಮರದ ತಿಮ್ಮಕ್ಕನ ಹೆಸರು ಪ್ರಸ್ತಾಪ ಮಾಡಿರುವ ಕನ್ನಡದ ಮುಖ್ಯವಾಹಿನಿ ಟಿವಿ9ನ ವರದಿ ಕುರಿತು ಸಾಲು ಮರದ ತಿಮ್ಮಕ್ಕನವರ ಪುತ್ರ ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿವಿ9ನ ಚಿಕ್ಕಮಗಳೂರು ವರದಿಗಾರರನ ವಿರುದ್ದ ತಿಮ್ಮಕ್ಕನ ಪುತ್ರ ಉಮೇಶ್  ಅಸಮಾಧಾನ ವ್ಯಕ್ತಪಡಿಸಿದ್ದು, ವರದಿಗಾರರನಿಂದ ಬಂದ ಸುದ್ದಿ ಪರಿಶೀಲನೆ ಮಾಡಬೇಕಾಗಿತ್ತು ಎಂದು ಟಿವಿ9 ವರದಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಉಮೇಶ್ ಸಾಲು ಮರದ ತಿಮ್ಮಕ್ಕನವರು ಇಡೀ ದೇಶಕ್ಕೆ ಪರಿಚಿತರಾದವರು. ಅವರ ಹೆಸರನ್ನು ಅನಾವಶ್ಯಕವಾಗಿ ಇಂತಹ ಕೇಸ್ ನಲ್ಲಿ ಬಳಸಿರುವುದು ಎಷ್ಟು ಸರಿ? ಮಾಧ್ಯಮಕ್ಕೆ ಜವಾಬ್ದಾರಿ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಈ ಬಗ್ಗೆ ನಾವು ಕಾನೂನಿನ ಹೋರಾಟ ಮಾಡುತ್ತೇವೆ ಎಂದು ವರದಿಗಾರನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇತ್ತೀಚಿನ ಸುದ್ದಿ