ರಸ್ತೆದಾಡುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದ ಕಾರು: ಹುಲಿ ಸಾವು - Mahanayaka

ರಸ್ತೆದಾಡುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದ ಕಾರು: ಹುಲಿ ಸಾವು

mysore
29/01/2024

ಮೈಸೂರು: ರಸ್ತೆ ದಾಟುತ್ತಿದ್ದ ಹುಲಿಯೊಂದಕ್ಕೆ ಕಾರು ಡಿಕ್ಕಿಯಾದ ಘಟನೆ ಮಂಡಕಳ್ಳಿ ಏರ್ ಪೋರ್ಟ್ ಬಳಿಯಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದ ಹುಲಿಗೆ ಕಾರು ಡಿಕ್ಕಿ  ಹೊಡೆದಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹುಲಿ ಸಾವನ್ನಪ್ಪಿದೆ.

ಸುಮಾರು ಒಂದೂವರೆ ವರ್ಷ ವಯಸ್ಸಿನ ಹುಲಿ ಸಾವನ್ನಪ್ಪಿದ ಹುಲಿ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಹುಲಿಗೆ ಡಿಕ್ಕಿ ಹೊಡೆದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ