ನೀರಿನೊಳಗಿನ ಅನಿಲ ಪೈಪ್‌ ಲೈನ್‌ ನಲ್ಲಿ ಸ್ಫೋಟ: ಭಯಾನಕ ದೃಶ್ಯ ವೈರಲ್ - Mahanayaka

ನೀರಿನೊಳಗಿನ ಅನಿಲ ಪೈಪ್‌ ಲೈನ್‌ ನಲ್ಲಿ ಸ್ಫೋಟ: ಭಯಾನಕ ದೃಶ್ಯ ವೈರಲ್

pipeline
26/07/2023


Provided by

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಯಮುನಾ ನದಿ ನೀರಿನಲ್ಲಿ ಹಠಾತ್ ಉಲ್ಬಣವಾಗಿರುವ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ವೈರಲ್ ಆಗಿದೆ. ನೀರಿನೊಳಗಿನ ಅನಿಲ ಪೈಪ್‌ಲೈನ್‌ನಲ್ಲಿ ಸ್ಫೋಟ ಉಂಟಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಿಳಿಸಿದೆ.

ಬಾಗ್‌ ಪತ್‌ ಜಿಲ್ಲೆಯ ಜಾಗೋಸ್ ಗ್ರಾಮದಲ್ಲಿ ಪಾಣಿಪತ್ ನೈಸರ್ಗಿಕ ಅನಿಲ ಪೈಪ್‌ಲೈನ್‌ನಲ್ಲಿ ಸೋರಿಕೆ ಸಂಭವಿಸಿರುವುದನ್ನು ಐಒಸಿ ಅಧಿಕಾರಿಗಳು ದೃಢಪಡಿಸಿದ್ದು ತಕ್ಷಣವೇ ಗುರುತಿಸಿ ಸರಿಪಡಿಸಲಾಗಿದೆ.
ಈ ಕುರಿತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸುಭಾಷ್ ಸಿಂಗ್ ಅವರು, ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ವಾಲ್ವ್‌ಗಳನ್ನು ಮುಚ್ಚುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲಎಂದು ತಿಳಿಸಿದರು.

ಗ್ರಾಮಸ್ಥರು ಯಮುನಾ ನದಿಯಲ್ಲಿ ನೀರಿನಲ್ಲಿ ಹಠಾತ್ ಉಲ್ಬಣವಾಗಿರುವುದನ್ನು ನೋಡಿದ್ದಾರೆ. ನಾವು ಸ್ಥಳಕ್ಕೆ ತಲುಪಿದಾಗ ಪಾಣಿಪತ್-ದಾದ್ರಿ ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗಿರುವುದು ತಿಳಿಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಈ ಪ್ರದೇಶದ ಜನರನ್ನು ಎಚ್ಚರಿಸಿದರು ಮತ್ತು ಘಟನೆಯ ಬಗ್ಗೆ ಗ್ಯಾಸ್ ಕಂಪೆನಿಗೆ ಮಾಹಿತಿ ನೀಡಿದರು. ಪೈಪ್‌ಲೈನ್‌ನಲ್ಲಿ ಅನಿಲ ಪೂರೈಕೆಯನ್ನು ನಿಲ್ಲಿಸಿ ವಾಲ್ವ್‌ಗಳನ್ನು ಮುಚ್ಚಲಾಯಿತು. ಈ‌ ಮೂಲಕ‌ ನಿಧಾನವಾಗಿ ಪರಿಸ್ಥಿತಿ ಸುಧಾರಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ