ಸಮಾನ ನಾಗರಿಕ ಸಂಹಿತೆಯನ್ನು ಪ್ರಶ್ನಿಸಲಾಗುವುದು: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿಕೆ - Mahanayaka

ಸಮಾನ ನಾಗರಿಕ ಸಂಹಿತೆಯನ್ನು ಪ್ರಶ್ನಿಸಲಾಗುವುದು: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿಕೆ

15/07/2024


Provided by

ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ಕೊಡಬೇಕು ಎಂಬ ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠದ ತೀರ್ಪನ್ನು ಮತ್ತು ಉತ್ತರಾಖಂಡ ಸರಕಾರ ಜಾರಿಗೊಳಿಸಲು ಹೊರಟಿರುವ ಸಮಾನ ನಾಗರಿಕ ಸಂಹಿತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ. ಲಾ ಬೋರ್ಡ್ ನ ವಕ್ತಾರ ಡಾಕ್ಟರ್ ಎಸ್ ಕ್ಯೂ ಆರ್ ಇಲ್ಯಾಸ್ ಅವರು ಈ ಮಾಹಿತಿ ನೀಡಿದ್ದಾರೆ.

ಇಸ್ಲಾಮಿನಲ್ಲಿ ದೇವನಿಗೆ ಅತ್ಯಂತ ಇಷ್ಟವಾಗದೇ ಇರುವುದು ವಿಚ್ಚೆಧನವಾ ಗಿದೆ. ಆದರೆ ಒಂದು ವೇಳೆ ವಿಚ್ಛೇದನ ನಡೆದರೆ ಆ ಬಳಿಕ ಆತನ ವಿಚ್ಛೇದಿತ ಪತ್ನಿಯನ್ನು ಈತನೇ ಸಾಕಬೇಕೆನ್ನುವುದಕ್ಕೆ ಯಾವುದೇ ಅರ್ಥ ಇಲ್ಲ ಎಂದು ಹೇಳಿದ್ದಾರೆ. ತನ್ನ ಕುಟುಂಬದ ಯಾವ ಭಾಗವೂ ಆಗಿಲ್ಲದ ವಿಚ್ಛೇದಿತ ಮಹಿಳೆಗೆ ಪುರುಷ ಯಾಕೆ ಜೀವನಾಂಶ ನೀಡಬೇಕು ಎಂದವರು ಪ್ರಶ್ನಿಸಿದ್ದಾರೆ. ವಿಚ್ಛೇದನದ ವೇಳೆ ಒಂದೇ ಬಾರಿ ನಿರ್ದಿಷ್ಟ ಮೊತ್ತವನ್ನು ಪರಿಹಾರವಾಗಿ ನೀಡುವುದು ಇಸ್ಲಾಮಿನ ನಿಲುವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಇದೇ ವೇಳೆ ಇದೇ ಅಕ್ಟೋಬರ್ ನಿಂದ ಜಾರಿಗೆ ಬರಲಿರುವ ಉತ್ತರಖಂಡದ ಸಮಾನ ನಾಗರಿಕ ಸಂಹಿತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ