ಏಕರೂಪ ನಾಗರಿಕ ಸಂಹಿತೆ ಜಾರಿಯಾದ್ರೆ ದಲಿತರ ಮೇಲೆ ಪ್ರಭಾವ ಬೀರಲ್ಲ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ - Mahanayaka
11:18 PM Tuesday 21 - October 2025

ಏಕರೂಪ ನಾಗರಿಕ ಸಂಹಿತೆ ಜಾರಿಯಾದ್ರೆ ದಲಿತರ ಮೇಲೆ ಪ್ರಭಾವ ಬೀರಲ್ಲ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

thumakur
08/05/2023

ತುಮಕೂರು: ಬಿಜೆಪಿ ಪ್ರಣಾಳಿಕೆ ಯಲ್ಲಿ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ ವಿಚಾರಕೇ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಏಕರೂಪ ನಾಗರಿಕ ಸಂಹಿತೆ ಜಾರಿಯಾದ್ರೆ ದಲಿತರ ಮೇಲೆ ಪ್ರಭಾವ ಬೀರಲ್ಲ ಎಂದು ಹೇಳಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಮಾತನಾಡಿದ ಅವರು, ದಲಿತರ ವಿರುದ್ದ ಚಕಾರ ಎತ್ತುವ ಧೈರ್ಯ ದೇಶದಲ್ಲಿ ಯಾವುದೇ ಪಾರ್ಟಿ ಅಧಿಕಾರಕ್ಕೆ ಬಂದರೂ ಸಾಧ್ಯವಿಲ್ಲ. ದಲಿತರ ವಿರುದ್ದವಾಗಿ ಸಂಸತ್ ನಲ್ಲಿ ಇದುವರೆಗೂ ಒಂದೇ ಒಂದು ಹೇಳಿಕೆ ಕೇಳಿ ಬಂದಿಲ್ಲ ಎಂದರು.

ದಲಿತರಿಗೆ ತೊಂದರೆಯಾಗುವಂತಹ ಯಾವುದೇ ಕಾನೂನು ಬಿಜೆಪಿ ಜಾರಿಗೆ ತರುವುದಿಲ್ಲ. ಬಿಜೆಪಿ ಸಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ನೀಡಿದೆ ಎಂದರು. ಚುನಾವಣೆಗಾಗಿ ಕೊಡುವುದಾದ್ರೇ ಬೇಡಾ..ಎಂದು ಆರ್ ಎಸ್ ಎಸ್, ಸಂಘ ಪರಿವಾರ ಎಲ್ಲರೂ ಸಹಮತ ನೀಡಿ ಒಳಮೀಸಲಾತಿ ಜಾರಿ ಮಾಡಿದೆ ಎಂದರು.

ಕೇಂದ್ರದಲ್ಲೂ ಪ್ರಧಾನಿ ಮೋದಿಯವರು ಒಳಮೀಸಲಾತಿಯನ್ನ ಅನುಮೋದನೆ ಮಾಡುತ್ತಾರೆಂಬ ವಿಶ್ವಾಸ ವಿದೆ ಎಂದರು. ಬಿಜೆಪಿ ಋಣ ತೀರಿಸುವ ಕೆಲಸವನ್ನ ಸಮಾಜ ಮಾಡುತ್ತದೆ ಎನ್ನುವ ನಂಬಿಕೆ ಇದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ