ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು

ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಇಂದು ಎಲೆಕ್ಷನ್ ಕಮಿಷನ್‍ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ. ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ.
ಜೆಎನ್‍ಯುನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತಾನಾಡುತ್ತಿದ್ದರು.ಆ ಭಾಷೆಯನ್ನು ಇವರು ಇಲ್ಲಿ ಬಳಸಿದ್ದಾರೆ. ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆಯೆಂಬ ದೃಷ್ಟಿಯಿಂದ ಬದುಕುತ್ತಿದ್ದೇವೆ.. ಆದರೆ ಅದನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದರು.
ಹಿಂದೆ ಇದೇ ರೀತಿ ಮಾತಾಡಿ ಕಾಶ್ಮೀರ ದೂರ ಮಾಡಿದರು. ಕಾಶ್ಮೀರ ಭಾರತದಿಂದ ದೂರ ಉಳಿಯಿತು. ಕಾಶ್ಮೀರದಲ್ಲಿ ಬೇರೆಯ ಧ್ವಜ ಇತ್ತು. ಮೊನ್ನೆ 370 ತಂದ ಬಳಿಕ ಕಾಶ್ಮೀರ ಭಾರತದ ಭಾಗ ಆಯಿತು. ಸೋನಿಯಾ ಅವರ ನಿರ್ಧಾರ ಏನೆಂಬುದನ್ನು ಬೇಗನೇ ಹೇಳಬೇಕು. ಇದನ್ನು ದೇಶ ನೋಡುತ್ತಿದೆ ಭಾರತದ ವಿರುದ್ಧ ಮಾತನಾಡುವ ಕೆಲಸ ಸೋನಿಯಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಯಾವುದೇ ಕಾರಣಕ್ಕೂ ಇದನ್ನು ಸಹಿಸಲ್ಲ. ಕುವೆಂಪು ಅವರು ಹೇಳುವಂತೆ ಜಯ ಭಾರತ ಜನನಿಯ ತನುಜಾತೆ ಅಂತ ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ತಿದ್ದೇವೆ. ಅಂತಹ ಒಗ್ಗಟ್ಟಿಗೆ ದಕ್ಕೆ ತರುವ ಕೆಲಸ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶೋಭಾ ಆಗ್ರಹಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw