ಮನೆಗೆ ಹೋಗ್ತಿದ್ದಾಗ ನಡೀತು ದಾಳಿ: ವಕೀಲರನ್ನು ಅಪಹರಿಸಿ ಥಳಿಸಿ ಹಲ್ಲೆ - Mahanayaka
2:19 AM Wednesday 17 - September 2025

ಮನೆಗೆ ಹೋಗ್ತಿದ್ದಾಗ ನಡೀತು ದಾಳಿ: ವಕೀಲರನ್ನು ಅಪಹರಿಸಿ ಥಳಿಸಿ ಹಲ್ಲೆ

26/01/2025

50 ವರ್ಷದ ವಕೀಲರೊಬ್ಬರನ್ನು ಅಪಹರಿಸಿ, ಥಳಿಸಿದ ನಂತರ ಜಜ್ಜಿ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕಪ್ತಾನ್‌ಗಂಜ್ ಪೊಲೀಸ್ ಠಾಣೆ ಪ್ರದೇಶದ ಬೈಡೋಲಿಯಾ ಅಜೈಬ್ ನಿವಾಸಿ ಚಂದ್ರಶೇಖರ್ ಯಾದವ್ (50) ಶನಿವಾರ ‘ಥಾನಾ ಸಮಧಾನ್ ದಿವಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಪ್ತಾನ್‌ಗಂಜ್ ಗೆ ಹೋಗಿದ್ದರು. ಸಂಜೆ ಬೈಕ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ನಾರಾಯಣಪುರ ಗ್ರಾಮದ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಕೆಲವರು ಅವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Provided by

ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುವ ಹೊತ್ತಿಗೆ, ಆರೋಪಿಗಳು ಯಾದವ್ ಅವರನ್ನು ತೀವ್ರವಾಗಿ ಥಳಿಸಿ ವಾಲ್ಟರ್ಗಂಜ್ ಪ್ರದೇಶದ ರಸ್ತೆಯಲ್ಲಿ ಎಸೆದಿದ್ದಾರೆ. ನಂತರ ಆರೋಪಿಗಳು ತಮ್ಮ ವಾಹನದೊಂದಿಗೆ ಓಡಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಕೀಲೆಯ ಸಹೋದರಿ ಮತ್ತು ಆಕೆಯ ಪತಿ ರಂಜೀತ್ ಯಾದವ್ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದಾರೆ. ಈ ಪ್ರಕರಣವನ್ನು ಹಲ್ಲೆಗೊಳಗಾದ ವಕೀಲರು ವಾದಿಸುತ್ತಿದ್ದರು ಎಂದು ಬಸ್ತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ