ಸಾಲದ ಜೊತೆಗೆ ಫೈನಾನ್ಸ್ ಕಂಪನಿಯ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗ ಸಾವು - Mahanayaka
5:58 AM Tuesday 16 - September 2025

ಸಾಲದ ಜೊತೆಗೆ ಫೈನಾನ್ಸ್ ಕಂಪನಿಯ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗ ಸಾವು

15/01/2025

ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ಸಾಲಬಾಧೆ ಮತ್ತು ಫೈನಾನ್ಸ್ ಕಂಪನಿಯೊಂದರ ನಿರಂತರ ಕಿರುಕುಳದಿಂದ ಬೇಸತ್ತು ದಂಪತಿ ತಾವೂ ವಿಷ ಸೇವಿಸಿದ್ದಲ್ಲದೇ ತಮ್ಮ ಮಕ್ಕಳಿಗೆ ವಿಷ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿಕಿತ್ಸೆಯ ಸಮಯದಲ್ಲಿ ಮಹಿಳೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಆಕೆಯ ಪತಿ ಮತ್ತು ಇತರ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಕೊಡಲಾಗ್ತಿದೆ.


Provided by

ಪೊಲೀಸರ ಪ್ರಕಾರ, ಸಹರಾನ್ಪುರದ ಗಗಲ್ಹೆಡಿ-ದೇವಬಂದ್ ರಸ್ತೆಯಲ್ಲಿ ಕುಟುಂಬದ ಎಲ್ಲಾ ಐದು ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಮತ್ತು ಜನವರಿ 13 ರ ಸೋಮವಾರ ತನ್ನ ಕಾರಿನಲ್ಲಿ ಇನ್ನೊಬ್ಬ ದಾರಿಹೋಕನು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವಿಕಾಸ್ (45) ಮತ್ತು ರಜನಿ (35) ದಂಪತಿ ಫ್ಯೂಷನ್ ಎಂಬ ಸಣ್ಣ ಹಣಕಾಸು ಕಂಪನಿಯಿಂದ ನಾಲ್ಕರಿಂದ ಐದು ಲಕ್ಷ ಸಾಲ ಪಡೆದಿದ್ದರು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಇಎಂಐಗಳನ್ನು ಪಾವತಿಸಲು ಸಾಧ್ಯವಾಗದ ನಂತರ, ಕಂಪನಿಯ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದರು ಮತ್ತು ಆಗಾಗ್ಗೆ ಅವರ ಮನೆಗೆ ಭೇಟಿ ನೀಡಿ, ಬೆದರಿಕೆ ಹಾಕಿದ್ದರು.

ವಿಷ ಸೇವಿಸಿದ ಕುಟುಂಬವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಮತ್ತೊಂದು ವೈದ್ಯಕೀಯ ಸೌಲಭ್ಯಕ್ಕೆ ಶಿಫಾರಸು ಮಾಡಿದರು. ಆದರೆ, ರಜನಿ ಮತ್ತು ಅವರ ಒಂದೂವರೆ ವರ್ಷದ ಮಗ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರೆ, ವಿಕಾಸ್ ಮತ್ತು ದಂಪತಿಯ ಇತರ ಇಬ್ಬರು ಮಕ್ಕಳು ಬದುಕುಳಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ