ವಾಟ್ಸಾಪ್ ಸ್ಟೇಟಸ್‌ ನಲ್ಲಿ ಮೃತ ಪತ್ನಿಯ ಫೋಟೋ ಹಂಚಿಕೊಂಡು ಪತಿ ಆತ್ಮಹತ್ಯೆ - Mahanayaka
5:35 PM Wednesday 24 - December 2025

ವಾಟ್ಸಾಪ್ ಸ್ಟೇಟಸ್‌ ನಲ್ಲಿ ಮೃತ ಪತ್ನಿಯ ಫೋಟೋ ಹಂಚಿಕೊಂಡು ಪತಿ ಆತ್ಮಹತ್ಯೆ

police
24/12/2025

ಲಕ್ನೋ: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮೊದಲ ಪತ್ನಿಯ ನೆನಪಿನಲ್ಲಿ 27 ವರ್ಷದ ಯುವಕನೊಬ್ಬ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಲಾಲ್‌ಪುರ ಗ್ರಾಮದ ನಿವಾಸಿ ಆಲೋಕ್ ವರ್ಮಾ ಮೃತ ವ್ಯಕ್ತಿ. ರಾಧೆ ನಗರದ ಹೋಟೆಲ್ ಒಂದರಲ್ಲಿ ಮಂಗಳವಾರ ಬೆಳಿಗ್ಗೆ ಇವರು ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಆಲೋಕ್ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮೃತಪಟ್ಟ ಮೊದಲ ಪತ್ನಿಯ ಫೋಟೋವನ್ನು ಹಂಚಿಕೊಂಡಿದ್ದರು. “ನಾನು ನಿನ್ನ ಬಳಿ ಬರುತ್ತಿದ್ದೇನೆ, ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿ” ಎಂದು ಸ್ಟೇಟಸ್ ಬರೆದುಕೊಂಡಿದ್ದರು.

ಪೊಲೀಸರ ಪ್ರಕಾರ, ಆಲೋಕ್ ಮೊದಲ ಪತ್ನಿ ಮೃತಪಟ್ಟ ನಂತರ ಅವರು ಎರಡನೇ ಮದುವೆಯಾಗಿದ್ದರು. ಆದರೆ ಮೊದಲ ಪತ್ನಿಯ ಸಾವಿನ ನೋವಿನಿಂದ ಅವರು ಹೊರಬಂದಿರಲಿಲ್ಲ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅವರು ಆಗಾಗ್ಗೆ ಈ ಹೋಟೆಲ್‌ಗೆ ಬಂದು ತಂಗುತ್ತಿದ್ದರು. ಸೋಮವಾರ ರಾತ್ರಿ ಕೊಠಡಿ ಪಡೆದಿದ್ದ ಅವರು, ಮಂಗಳವಾರ ಬೆಳಿಗ್ಗೆ ಎಷ್ಟು ಕರೆ ಮಾಡಿದರೂ ಬಾಗಿಲು ತೆರೆಯದಿದ್ದಾಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಾಗಿಲು ಮುರಿದು ಒಳಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

(ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಮಾನಸಿಕ ಒತ್ತಡವಿದ್ದರೆ ಅಥವಾ ಇಂತಹ ಆಲೋಚನೆಗಳಿದ್ದರೆ ಕೂಡಲೇ ಸಹಾಯವಾಣಿ ಅಥವಾ ತಜ್ಞರ ನೆರವು ಪಡೆಯಿರಿ.)


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ