ಪ್ರಾಣ ತೆಗೆದ ರೀಲ್ಸ್ ಹುಚ್ಚು: ವೀಡಿಯೋ ಮಾಡುತ್ತಿದ್ದಾಗ ಯುವಕನ ಪಾಲಿಗೆ ಯಮನಾಗಿ ಬಂದ ರೈಲು..! - Mahanayaka
12:54 PM Sunday 14 - December 2025

ಪ್ರಾಣ ತೆಗೆದ ರೀಲ್ಸ್ ಹುಚ್ಚು: ವೀಡಿಯೋ ಮಾಡುತ್ತಿದ್ದಾಗ ಯುವಕನ ಪಾಲಿಗೆ ಯಮನಾಗಿ ಬಂದ ರೈಲು..!

01/10/2023

ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ‌ ನಡೆದಿದೆ. ಉತ್ತರ ಪ್ರದೇಶದ ಜಹಾಂಗೀರಾಬಾದ್‌ನ ತೇರಾ ದೌಲತ್‌ಪುರ ನಿವಾಸಿ ಮುನ್ನಾ ಅವರ 14 ವರ್ಷದ ಮಗ ಫರ್ಮಾನ್‌ ರೈಲ್ವೇ ಹಳಿ ಮೇಲೆ ರೀಲ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಯುವಕ. ಹಳಿಯ ಮೇಲೆ ರೀಲ್​​ ಮಾಡಲು ಯುವಕ ಪ್ರಾರಂಭಿಸುತ್ತಿದ್ದಂತೆ ರೈಲು ಬಂದು ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಇವನು ತನ್ನ ಸ್ನೇಹಿತರಾದ ಶುಐಬ್, ನಾದಿರ್ ಮತ್ತು ಸಮೀರ್ ಜೊತೆ ರೀಲ್ಸ್​​ ಮಾಡಲು ಹೋಗಿದ್ದ. ಆದರೆ ಫರ್ಮಾನ್ ದಾಮೆದರ್‌ಪುರ ಗ್ರಾಮದ ಪಕ್ಕದ ರೈಲ್ವೆ ಕ್ರಾಸಿಂಗ್ ಬಳಿ ರೈಲು ಹಳಿಗಳ ಬಳಿ ನಿಂತು ರೀಲ್‌ ಮಾಡಲು ತಯಾರಿ ನಡೆಸುತ್ತಿದ್ದಂತೆ ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದು ವೇಗದ ರಭಸಕ್ಕೆ ಆತನನ್ನು ಸ್ಪಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದೆ.

ರೈಲಿನ ವೇಗದ ರಭಸಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಹತ್ತಿರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿ ಧರ್ಮೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ