ಯುಪಿಎಸ್ ಬ್ಯಾಟರಿ ಕಳ್ಳರ ಬಂಧನ - Mahanayaka
5:48 PM Tuesday 18 - November 2025

ಯುಪಿಎಸ್ ಬ್ಯಾಟರಿ ಕಳ್ಳರ ಬಂಧನ

j.p nagar
10/07/2023

ಬೆಂಗಳೂರು: ಯುಪಿಎಸ್ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ 3ಆರೋಪಿಗಳನ್ನು ಬಂಧಿಸಿರುವ ಪೊಲೀಸರು‌‌ 8ಲಕ್ಷ‌ ಮೌಲ್ಯದ ಒಟ್ಟು 52 ಬ್ಯಾಟರಿಗಳ ವಶ ಪಡಿಸಿಕೊಂಡಿದ್ದಾರೆ.

ಜೆ.ಪಿ.ನಗರ ಪೊಲೀಸ್‌ ಠಾಣ ಸರಹದ್ದಿನ ಜಲಮಂಡಳಿ ಸೇವಾ ಠಾಣೆಯ ಯುಪಿಎ ಆಳವಡಿಸಿದ್ದ. 05 ಬ್ಯಾಟರಿಗಳು ಕಳುವಾದ ಬಗ್ಗೆ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ತ ದಾಖಲಾಗಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಜುಲೈ‌8 ರಂದು 03 ಜನ ಆರೋಪಿ ಬಂಧಿಸಿ, ಅವರು ನೀಡಿದ ಮಾಹಿತಿ ಮೇರೆಗೆ, ಬೆಂಗಳೂರು ನಗರದ ವಿವಿಧ ಕಡೆಯಲ್ಲಿ ಕಳ್ಳತನ ಮಾಡಿ ಒಟ್ಟು 52 ಬ್ಯಾಟರಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಪಡಿಸಿಕೊಂಡಿದ್ದು,ಇದರ ಒಟ್ಟು ಮೌಲ್ಯ .8‌ಲಕ್ಷ ರೂ.ಆಗಿವೆ.

ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಪಿ.ಕೃಷ್ಣಕಾಂತ್, ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಕೆ.ವಿ.ಶ್ರೀನಿವಾಸ ರವರುಗಳ ಮಾರ್ಗದರ್ಶನದಲ್ಲಿ ಜೆ.ಪಿ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ