ಫ್ಲಾಯ್ಡ್ ನನ್ನು ಹತ್ಯೆ ಮಾಡಿದ ಪೊಲೀಸ್ ಗೆ ಭಾರೀ ಶಿಕ್ಷೆ ಪ್ರಕಟಿಸಿದ ಕೋರ್ಟ್! - Mahanayaka
9:17 AM Thursday 16 - October 2025

ಫ್ಲಾಯ್ಡ್ ನನ್ನು ಹತ್ಯೆ ಮಾಡಿದ ಪೊಲೀಸ್ ಗೆ ಭಾರೀ ಶಿಕ್ಷೆ ಪ್ರಕಟಿಸಿದ ಕೋರ್ಟ್!

floyd
26/06/2021

ವಾಷಿಂಗ್ಟನ್: ವರ್ಣಬೇಧ ಆಚರಿಸುವ ಮೂಲಕ, ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರನ್ನು ಹತ್ಯೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿ  ಈ ಬಗ್ಗೆ ಭಾರೀ ಹೋರಾಟಗಳೇ ನಡೆದು ಹೋಗಿತ್ತು. ಇದೀಗ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ ಇಲ್ಲಿನ ನ್ಯಾಯಾಲಯ ಭಾರೀ ಶಿಕ್ಷೆಯನ್ನು ನೀಡಿದೆ.


Provided by

ಡೆರೆಕ್ ಚೌವಿನ್ ಗೆ 22.5 ವರ್ಷಗಳ ಜೈಲು ಶಿಕ್ಷೆಯನ್ನು ಮಿನೆಸೋಟಾ ರಾಜ್ಯದ ಕೋರ್ಟ್ ನೀಡಿದೆ. ಚೌವಿನ್ ವಿರುದ್ಧ ಫ್ಲಾಯ್ಡ್ ಪ್ರಕರಣ ಹೊರತು ಪಡಿಸಿದರೆ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ದಾಖಲಾಗದೇ ಇರುವುದರಿಂದ ಆತನಿಗೆ 12 ವರ್ಷಗಳ ಕಾಲ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಆದರೆ ನ್ಯಾಯಾಲಯವು  “ಈ ಪ್ರಕರಣ ಅತ್ಯಂತ ಕ್ರೂರವಾದದ್ದು” ಎಂದು ಹೇಳಿ 22.5 ವರ್ಷಗಳ ಕಠಿಣ ಸಜೆಯನ್ನು ನೀಡಿದೆ.

ಫ್ಲಾಯ್ಡ್ ಕುಟುಂಬವು, ಆರೋಪಿಗೆ 30 ವರ್ಷಗಳ ಜೈಲು ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಕೂಡ ಎಲ್ಲ ರೀತಿಯ ಕಾನೂನು ವ್ಯಾಪ್ತಿಗಳಲ್ಲಿ 22.5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಮೇ 25, 2020ರಂದು ಮಿನೆಸೋಟಾದ ಅಂಗಡಿಯೊಂದರಲ್ಲಿ ನಕಲಿ ಬಿಲ್ ಬಳಸಿದ ಆರೋಪದ ಮೇಲೆ ಫ್ಲಾಯ್ಡ್ ನನ್ನು ವಶಕ್ಕೆ ಪಡೆದಿದ್ದರು. ನಿರಾಯುಧನಾಗಿದ್ದ ಫ್ಲಾಯ್ಡ್ ನ್ನು  ಡೆರೆಕ್ ಚೌವಿನ್  ತನ್ನ ಮಂಡಿಯಲ್ಲಿ ಆತನ ಕತ್ತಿನ ಹಿಂಭಾಗಕ್ಕೆ ಅದುಮಿಟ್ಟಿದ್ದ. “ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ” ಎಂದು ಫ್ಲಾಯ್ಡ್ ಪರಿಪರಿಯಾಗಿ ಬೇಡಿಕೊಂಡರೂ ಆತ ಸಾವನ್ನಪ್ಪುವವರೆಗೂ ಚೌವಿನ್ ತನ್ನ ಹಿಡಿತ ಸಡಿಲ ಮಾಡಲೇ ಇಲ್ಲ. ಈ ದೃಶ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು.

ಇತ್ತೀಚಿನ ಸುದ್ದಿ