ಜಿ20 ಶೃಂಗಸಭೆ: ಇಂಡಿಯಾ ಬದಲು ಭಾರತ್ ಹೆಸರು ಬಳಕೆ - Mahanayaka
2:06 AM Thursday 23 - October 2025

ಜಿ20 ಶೃಂಗಸಭೆ: ಇಂಡಿಯಾ ಬದಲು ಭಾರತ್ ಹೆಸರು ಬಳಕೆ

narendra modhi
09/09/2023

ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದರು.

ಭಾಷಣದ ವೇಳೆ ಅವರ ಮುಂದಿದ್ದ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆಯಲಾಗಿದ್ದು, ಇಂಡಿಯಾ ಹೆಸರಿಗೆ ಪರ್ಯಾಯವಾಗಿ ಭಾರತ್ ಹೆಸರನ್ನು ಬಳಕೆ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಜಿ-20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ– ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.

ಇತ್ತೀಚಿನ ಸುದ್ದಿ