ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಕಕ್ರಾಲಾ ಪ್ರದೇಶದಲ್ಲಿ ಹಲ್ಲೆ, ಗುಂಡಿನ ದಾಳಿ - Mahanayaka
12:48 PM Wednesday 15 - October 2025

ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಕಕ್ರಾಲಾ ಪ್ರದೇಶದಲ್ಲಿ ಹಲ್ಲೆ, ಗುಂಡಿನ ದಾಳಿ

shoot
15/03/2022

ಲಕ್ನೋ: ಉತ್ತರ ಪ್ರದೇಶ ಚುನಾವಣೆ ನಂತರ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಚುನಾವಣಾ ವಾಗ್ವಾದ ನಡೆದಿದ್ದು, ಬಳಿಕ ಬದೌನ್ ಜಿಲ್ಲೆಯ ಅಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ರಾಲಾ ಪ್ರದೇಶದಲ್ಲಿ ಹಲ್ಲೆ ಮತ್ತು ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.


Provided by

ಈ ಪ್ರಕರಣದಲ್ಲಿ ಹಲವಾರು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. ಬಿಜೆಪಿ ಮತ್ತು ಎಸ್‌ಪಿ ಬೆಂಬಲಿಗ ಇಸ್ರಾರ್ ಆಲಿಯಾಸ್ ಮೆಲಿ ಚುನಾವಣೆಯ ಬಗ್ಗೆ ತಮ್ಮ ಬೆಂಬಲಿಗರೊಂದಿಗೆ ವಾದಿಸುತ್ತಿದ್ದರು. ನಂತರ ಈ ವಾದ ಹಿಂಸಾತ್ಮಕವಾಗಿ ಬದಲಾಯಿತು ಎನ್ನಲಾಗಿದೆ.

ಇದಾದ ಬಳಿಕ ಎರಡೂ ಎರಡೂ ಪಕ್ಷಗಳ ಕಾರ್ಯಕರ್ತರು ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. ಆದರೆ ಪೊಲೀಸರು ಬಂದ ಕೂಡಲೇ ಅವರೆಲ್ಲ ಅಲ್ಲಿಂದ ಪರಾರಿಯಾದರು ಎಂದು ಅವರು ಹೇಳಿದರು. ಸ್ವಲ್ಪ ಸಮಯದ ನಂತರ ಅವರು ಹಿಂದಿರುಗಿದ ನಂತರ, ಅವರು ಮತ್ತೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ ಮತ್ತು ಎಸ್‌ಪಿ ಅಭ್ಯರ್ಥಿ ಗೆದ್ದಿದ್ದಾರೆ. ಅಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಸಬಾ ಕಕ್ರಾಲಾದಲ್ಲಿ ಚುನಾವಣಾ ವಾಗ್ವಾದದ ನಂತರ ಎರಡು ಪಕ್ಷಗಳ ಬೆಂಬಲಿಗರ ನಡುವೆ ಹಲ್ಲೆ, ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯ ಘಟನೆಯ ಗಂಭೀರತೆಯ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಮತ್ತು ಡ್ರೋನ್ ಕ್ಯಾಮೆರಾಗಳಿಂದ ಕಣ್ಗಾವಲು ಇಡಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ನಗರ) ಪ್ರವೀಣ ಸಿಂಗ್ ಚೌಹಾಣ್ ತಿಳಿಸಿದರು.

ಈ ಪ್ರಕರಣದಲ್ಲಿ, ಪೊಲೀಸರು ಏಳು ಕ್ರಿಮಿನಲ್ ಕೇಸು ಸೇರಿದಂತೆ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ 12 ಹೆಚ್ಚು ಮಂದಿಯ ಮೇಲೆ ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಚೌಹಾಣ್ ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಸರ್ಕಾರದ ‘ವಸ್ತ್ರ ಸಂಹಿತೆ’ ಆದೇಶ ಕಾನೂನುಬದ್ಧವಾಗಿದೆ  ಎಂದ ಹೈಕೋರ್ಟ್

ಹಿಜಾಬ್ ವಿವಾದ: ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದ ಹೈಕೋರ್ಟ್

ತಾಜ್ ವೆಸ್ಟೆಂಡ್‌ ನಲ್ಲಿ ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಸಿ.ಪಿ.ಯೋಗೇಶ್ವರ್​ ಗೆ ಎಚ್​.ಡಿ.ಕುಮಾರಸ್ವಾಮಿ ತಿರುಗೇಟು

ಇಂದು ಹಿಜಾಬ್​ ತೀರ್ಪು: ಉಡುಪಿ, ದ.ಕ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೊಲೆರೋ – ಟ್ರಕ್ ಮಧ್ಯೆ ಡಿಕ್ಕಿ: ಐವರು ಸಾವು, ನಾಲ್ವರಿಗೆ ಗಾಯ

 

ಇತ್ತೀಚಿನ ಸುದ್ದಿ