ಕೆಮಿಕಲ್ ತುಂಬಿದ ಟ್ಯಾಂಕರ್ ಸ್ಫೋಟ: ರಸ್ತೆಯಲ್ಲಿಯೇ ವ್ಯಾಪಿಸಿದ ಬೆಂಕಿ - Mahanayaka
9:30 AM Wednesday 20 - August 2025

ಕೆಮಿಕಲ್ ತುಂಬಿದ ಟ್ಯಾಂಕರ್ ಸ್ಫೋಟ: ರಸ್ತೆಯಲ್ಲಿಯೇ ವ್ಯಾಪಿಸಿದ ಬೆಂಕಿ

uttara kannada
13/10/2021


Provided by

ಉತ್ತರಕನ್ನಡ:  ಕೆಮಿಕಲ್ ತುಂಬಿದ ಟ್ಯಾಂಕರ್ ಸ್ಫೋಟಗೊಂಡಿದ್ದು ಪರಿಣಾಮವಾಗಿ ಘಟನೆ ನಡೆದ ಸ್ಥಳದಲ್ಲಿ ಬೆಂಕಿ ಹತ್ತಿಕೊಂಡು ಆತಂಕ ಸೃಷ್ಟಿಯಾದ ಘಟನೆ ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ಮಂಗಳೂರಿನಿಂದ ಗುಜರಾತ್ ಗೆ ಈ ಟ್ಯಾಂಕರ್ ತೆರಳುತ್ತಿತ್ತು ಎನ್ನಲಾಗಿದೆ.  ಅರಬೈಲ್ ಘಟ್ಟದ ಬಳಿಯಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಲಾರಿ ಹೊತ್ತಿ ಉರಿದಿದೆ. ಪರಿಣಾಮವಾಗಿ ಲಾರಿಯಲ್ಲಿದ್ದ ಕೆಮಿಕಲ್ ಸೋರಿಕೆಗೊಂಡು ಬಹಳಷ್ಟು ದೂರದವರೆಗೆ ಬೆಂಕಿ ವ್ಯಾಪಿಸಿದ್ದು, ಸ್ಥಳೀಯರು ಆತಂಕಕ್ಕೀಡಾದ ಘಟನೆ ನಡೆಯಿತು.

ಘಟನಾ ಸ್ಥಳಕ್ಕೆ ಮುಂದಗೋಡು ಅಗ್ನಿಶಾಮಕ ದಳ ತಂಡ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಡಿಕೆಶಿ ಕುಡುಕರಂತೆ ತೊದಲುತ್ತಾರೆ, ಕಲೆಕ್ಷನ್ ಗಿರಾಕಿ | ಮೈಕ್ ಆನ್ ಆಗಿರೋದು ತಿಳಿಯದೇ ಮಾತನಾಡಿ ಕಾಂಗ್ರೆಸ್ ನಾಯಕರ ಯಡವಟ್ಟು!

ನಿರಂತರ ಮಳೆಗೆ ವಾಲಿ ನಿಂತ ಕಟ್ಟಡ: ಯಾವುದೇ ಸಮಯದಲ್ಲಿ ಕಟ್ಟಡ ಕುಸಿಯುವ ಭೀತಿ

ಗುಂಡೇಟಿನಿಂದ ಮಾಲಿಕನ ಪ್ರಾಣ ಉಳಿಸಿದ ಸ್ಮಾರ್ಟ್ ಫೋನ್!

ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ ಒಂದೇ ಮತ | ತನ್ನ ಕುಟುಂಬದ 5 ಮಂದಿಯೂ ಬಿಜೆಪಿಗೆ ವೋಟ್ ಹಾಕಲಿಲ್ಲ!

ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್

ಮುಸ್ಲಿಮರ ಮುಂಗೈಗೆ ಬೆಲ್ಲ: ಕಾಂಗ್ರೆಸ್ ನ ನಿಜಬಣ್ಣವನ್ನು ಸಿ.ಎಂ.ಇಬ್ರಾಹಿಂ ಬೆತ್ತಲಾಗಿಸಿದ್ದಾರೆ | ಕಾಂಗ್ರೆಸ್ ಗೆ ಚುಚ್ಚಿದ ಬಿಜೆಪಿ

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ತಾಯಿ ಮಗುವಿಗೆ ಡಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್

ಇತ್ತೀಚಿನ ಸುದ್ದಿ