ವಾಹನಗಳ ಮೇಲೆ ಕಾಡಾನೆ ದಾಳಿ, ಕಾಡಿಗೆ ಹೋಗದೇ ನಾಡಿನಲ್ಲೇ ಬೀಡುಬಿಟ್ಟ ಆನೆ - Mahanayaka
11:47 AM Tuesday 14 - October 2025

ವಾಹನಗಳ ಮೇಲೆ ಕಾಡಾನೆ ದಾಳಿ, ಕಾಡಿಗೆ ಹೋಗದೇ ನಾಡಿನಲ್ಲೇ ಬೀಡುಬಿಟ್ಟ ಆನೆ

16/02/2021

ಹುಣಸೂರು: ಕಾಡಾನೆಯ ದಾಳಿಗೆ ಟ್ರಾಕ್ಟರ್ ಟ್ರಾಲಿ  ಮತ್ತು ಕಾರು ಜಖಂಗೊಂಡಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ಅರಣ್ಯ ವಲಯದಲ್ಲಿ ನಡೆದಿದೆ.


Provided by

ಚಿಕ್ಕಹೆಜ್ಜೂರು ಮತ್ತು ಮುದುಗನೂರು ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ ಕಾಲಿಟ್ಟ ಆನೆ ಟ್ರಾಕ್ಟರ್ ಟ್ರಾಲಿಯನ್ನು ಎತ್ತಿ ಮಗುಚಿ ಹಾಕಿದೆ. ಅಲ್ಲದೇ ಸಂಪೂರ್ಣವಾಗಿ ಜಖಂಗೊಳಿಸಿದೆ.

ಚಿಕ್ಕ ಹೆಜ್ಜೂರುನ ಭಾಸ್ಕರ್ ರವರಿಗೆ ಸೇರಿದ ಕೆ ಎ 52 ಎಂ ಎಪ್ 9688 ಮಾರುತಿ ಆಲ್ಟೊ ಕಾರ್ ನ ಹಿಂದಿನ ಮತ್ತು ಮುಂದಿನ  ಗಾಜನ್ನು ಆನೆಒಡೆದು ಹಾಕಿ ಕಾರನ್ನು ಜಖಂಗೊಳಿಸಿದೆ.

ಕಾಡಾನೆ ಕಾಡಿಗೆ ತೆರಳದೆ ನಾಗಪುರ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯವರು ಸಲಗವನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ