‘ವರಾಹ ರೂಪಂ’ ಹಾಡು ಕಾಪಿ ಎಂದ ಮಲಯಾಳಂ ನವರಸಂ ತಂಡ: ದೂರು ನೀಡಲು ನಿರ್ಧಾರ - Mahanayaka

‘ವರಾಹ ರೂಪಂ’ ಹಾಡು ಕಾಪಿ ಎಂದ ಮಲಯಾಳಂ ನವರಸಂ ತಂಡ: ದೂರು ನೀಡಲು ನಿರ್ಧಾರ

varaha rupam copy
25/10/2022

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಸಂಸ್ಕೃತ ಹಾಡು ಇದೀಗ ವಿವಾದಕ್ಕೀಡಾಗಿದ್ದು, ಈ ಹಾಡಿನ ವಿರುದ್ಧ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ.

ಮಲಯಾಳಂ ಭಾಷೆಯ ‘ನವರಸಂ’ ಹಾಡಿನಿಂದ ವರಾಹ ರೂಪಂ ಹಾಡನ್ನು ಕಾಪಿ ಮಾಡಲಾಗಿದೆ ಅನ್ನೋ ಆರೋಪ ಇದೀಗ ಕೇಳಿ ಬಂದಿದೆ. ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ.

ಮಲಯಾಳಂನ ತೈಕ್ಕುಡಂ ಬ್ರಿಡ್ಜ್’ ತಂಡದವರು ಕಾಂತಾರ ಚಿತ್ರ ತಂಡದ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ವರಾಹ ರೂಪಂ ಹಾಗೂ ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆ ಕಾಪಿ ರೈಟ್ ಕಾನೂನಿನ ಉಲ್ಲಂಘಣೆಯಾಗಿದ್ದು,  ನಾವು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ‘ತೈಕ್ಕುಡಂ ಬ್ರಿಡ್ಜ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದೆ.

ವರಾಹ ರೂಪಂ ಹಾಡು:

ನವರಸಂ ಹಾಡು:


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ