ಮೇ.9, 10ರಂದು ‘KSRTC ಬಸ್’ ಸಂಚಾರದಲ್ಲಿ ವ್ಯತ್ಯಯ - Mahanayaka
4:06 PM Saturday 31 - January 2026

ಮೇ.9, 10ರಂದು ‘KSRTC ಬಸ್’ ಸಂಚಾರದಲ್ಲಿ ವ್ಯತ್ಯಯ

ksrtc
06/05/2023

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ, ಚುನಾವಣಾ ಆಯೋಗದಿಂದ ಸುಗಮ ಮತದಾನಕ್ಕಾಗಿ ಪೊಲೀಸರು ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳನ್ನು ಕರೆದೊಯ್ಯಲು ಸಾರಿಗೆ ಬಸ್ ಬಳಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮೇ.9 ಮತ್ತು 10ರಂದು ಕೆ ಎಸ್ ಆರ್ ಟಿ ಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಹಿತಿ ನೀಡಲಾಗಿದೆ. ದಿನಾಂಕ 10-05-2023ರಂದು ವಿಧಾನಸಭಾ ಚುನಾವಣೆಗೆ ಕೆ ಎಸ್ ಆರ್ ಟಿಸಿಯಿಂದ ಚುನಾವಣಾ ಕಾರ್ಯದ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದೆ.

ಮತದಾನ ಕಾರ್ಯದ ಸುಗಮ ನಡೆಗಾಗಿ ಸಾರಿಗೆ ಬಸ್ ಗಳನ್ನು ( Transport Bus ) ಮತಗಟ್ಟೆ ಸಿಬ್ಬಂದಿ, ಪೊಲೀಸರನ್ನು ಕೊಂಡೊಯ್ಯಲು ಸಾರಿಗೆ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಅದುದರಿಂದ ದಿನಾಂಕ 09-05-2023 ಮತ್ತು ಮತದಾನ ನಡೆಯುವಂತ ದಿನಾಂಕ 10-05-2023ರಂದು ನಿಗಮದ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದಿದೆ.

ಮತದಾನಕ್ಕೂ ಮುನ್ನಾ ದಿನವಾದಂತ ಮೇ.9 ಮತ್ತು ಮತದಾನದ ದಿನವಾದ ಮೇ.10ರಂದು KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸುವಂತೆ, ಪರ್ಯಾಯ ವ್ಯವಸ್ಥೆಯೊಂದಿಗೆ ಸಂಚರಿಸಲು ವಿನಂತಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ