ವಾಯು ಮಾಲಿನ್ಯದಿಂದ ಕಂಗೆಟ್ಟ ದೆಹಲಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ - Mahanayaka
3:40 PM Wednesday 15 - October 2025

ವಾಯು ಮಾಲಿನ್ಯದಿಂದ ಕಂಗೆಟ್ಟ ದೆಹಲಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

delhi
17/11/2021

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದೀಗ ಈ ಸಂಬಂಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಾಯು ಮಾಲಿನ್ಯದಿಂದಾಗಿ ದೆಹಲಿ-ಎನ್ ಸಿಆರ್ ನಲ್ಲಿ ದಟ್ಟ ಹೊಗೆ ಆವರಿಸಿದ್ದು, ಇದೇ ಸಂದರ್ಭದಲ್ಲಿ ಶಾಲೆ, ಕಾಲೇಜುಗಳ ಸಹಿತ ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲು ವಾಯು ಗುಣಮಟ್ಟ ನಿರ್ವಹಣಾ ಸಮಿತಿ ನಿರ್ದೇಶನ ನೀಡಿದೆ.


Provided by

ಇನ್ನೂ ದೆಹಲಿಯಲ್ಲಿ ಶಾಲೆ ಕಾಲೇಜುಗಳಿಗೆ ಮತ್ತೆ ಆನ್ ಲೈನ್ ಕ್ಲಾಸ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೆಹಲಿಯ 300 ಕಿ.ಮೀ. ವ್ಯಾಪ್ತಿಯಲ್ಲಿರುವ 11 ಥರ್ಮಲ್ ವಿದ್ಯುತ್ ಸ್ಥಾವರಗಳ ಪೈಕಿ ಕೇವಲ 5 ವಿದ್ಯುತ್ ಸ್ಥಾವರಗಳು ನವೆಂಬರ್ 30ರವರೆಗೆ ಕಾರ್ಯನಿರ್ವಹಿಸಲಿವೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ  ನವೆಂಬರ್ 21ರವರೆಗೆ ಯಾವುದೇ ಕಟ್ಟಡ ಕಾಮಗಾರಿ, ಕಟ್ಟಡ ತೆರವು ಕಾರ್ಯಾಚರಣೆ ನಡೆಸದಂತೆ ಸಮಿತಿ ಸೂಚಿಸಿದೆ. ಬಸ್ ರೈಲು, ಮೆಟ್ರೋ ಮತ್ತು ಮಿಲಿಟರಿಗೆ ಸಂಬಂಧಿತ ಸಂಚಾರಗಳನ್ನು ಕಠಿಣ ನಿಯಮಾವಳಿಗಳ ಅನ್ವಯ ನಡೆಸುವಂತೆ ತಿಳಿಸಲಾಗಿದೆ.

ಅಗತ್ಯ ವಸ್ತುಗಳಲ್ಲದ ಸರಕು ಸಾಗಾಣೆ ಟ್ರಕ್ ಗಳಿಗೆ ಭಾನುವಾರದವರೆಗೆ ದೆಹಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.  ವಾಯು ಮಾಲಿನ್ಯ ಹೆಚ್ಚಾಗಿರುವ ದೆಹಲಿ ಎನ್ ಸಿಆರ್ ವ್ಯಾಪ್ತಿಯ ರಾಜ್ಯಗಳಾದ ಹರ್ಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನಗಳ ಉನ್ನತ ಅಧಿಕಾರಿಗಳ ಜೊತೆ ವಾಯ ಗುಣಮಟ್ಟ ನಿರ್ವಹಣಾ ಸಮಿತಿ ಸಭೆ ನಡೆಸಿದೆ. ಇನ್ನೂ ವರ್ಕ್ ಫ್ರಂ ಹೋಮ್ ಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಮದ್ರಸದಿಂದ ಬರುತ್ತಿದ್ದ ಬಾಲಕನ ಮೇಲೆ ಎರಗಿದ ಹುಚ್ಚುನಾಯಿ!

ಪುನೀತ್ ಅವರಿಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು | ಸಿಎಂ ಬಸವರಾಜ್ ಬೊಮ್ಮಾಯಿ

ಒಂದು ಕೆನ್ನೆಗೆ ಹೊಡೆದಾಗ ಇನ್ನೊಂದು ಕೆನ್ನೆ ತೋರಿಸಿದರೆ, ಸಿಗೋದು ಸ್ವಾತಂತ್ರ್ಯ ಅಲ್ಲ, ಭಿಕ್ಷೆ | ಮತ್ತೆ ಕಂಗನಾ ಟೀಕೆ

“ಸತ್ಯ ನುಡಿದಿದ್ದಕ್ಕೆ ಹಂಸಲೇಖ ಕ್ಷಮೆಯಾಚಿಸಿದರು” | ಹಂಸಲೇಖ ಅವರಿಗೆ ವ್ಯಕ್ತವಾಗುತ್ತಿದೆ ಭಾರೀ ಬೆಂಬಲ

ಪರೀಕ್ಷೆ ಬರೆದು ಪಾಸ್ ಆದ 104 ವರ್ಷದ ಕುಟ್ಟಿಯಮ್ಮಗೆ ಅಭಿನಂದನೆಗಳ ಮಹಾಪೂರ

ಇತ್ತೀಚಿನ ಸುದ್ದಿ