ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕೇಳಿತು ಮಹಿಳೆ ನರಳಾಟ | ಎರಡು ಜೀವಗಳನ್ನು ಉಳಿಸಿದ ದಂಪತಿ - Mahanayaka
10:46 AM Thursday 21 - August 2025

ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕೇಳಿತು ಮಹಿಳೆ ನರಳಾಟ | ಎರಡು ಜೀವಗಳನ್ನು ಉಳಿಸಿದ ದಂಪತಿ

kerala
12/04/2021


Provided by

ತ್ರಿಶೂರ್: ವಾಯುವಿಹಾರಕ್ಕೆ ತೆರಳಿದ್ದ ದಂಪತಿ ಎರಡು ಜೀವಗಳನ್ನು ಉಳಿಸಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದ್ದು, ವನಿಯಂಪಾರ ನಿವಾಸಿ ದಂಪತಿಯ ಈ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.

ಎರಪ್ಪರ ಮ್ಯಾಥೀವ್ ಮತ್ತು ಆತನ ಪತ್ನಿ ಗ್ರೆಟೆಲ್ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ರಸ್ತೆ ಬಳಿಯ ಮನೆಯೊಂದರಲ್ಲಿ ಮಹಿಳೆಯ ನರಳಾಟ ಕೇಳಿಸಿದೆ. ತಕ್ಷಣವೇ ಮಹಿಳೆಯ ಸಹಾಯಕ್ಕೆ ದಂಪತಿ ಧಾವಿಸಿದ್ದಾರೆ.

ಮನೆಯೊಳಗೆ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ನರಳಾಡುತ್ತಿದ್ದರು. ಆದರೆ ಮಹಿಳೆಯ ಬಳಿಯಲ್ಲಿ ಯಾರೊಬ್ಬರೂ ಇರಲಿಲ್ಲ. ಇದನ್ನು ನೋಡಿದ ದಂಪತಿ ತಕ್ಷಣವೇ ಮಹಿಳೆಗೆ ನೆರವಾಗಿದ್ದಾರೆ.

ಗ್ರೇಟೆಲ್ ಅವರು ನರ್ಸ್ ಆಗಿದ್ದು, ಹೀಗಾಗಿ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ನಡೆಸಿದರು. ಮಗು ಹೊರ ಬಂದರೂ ಮಗು ಅಳುತ್ತಿರಲಿಲ್ಲ. ಈ ಸಂದರ್ಭ  ಗ್ರೇಟೆಲ್ ದಂಪತಿ ಪ್ರಥಮ ಚಿಕಿತ್ಸೆ ನೀಡಿದಾಗ ಮಗು ಅಳಲು ಆರಂಭಿಸಿದೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ತಾಯಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚಿನ ಸುದ್ದಿ