ವೇದ ಗಣಿತ ಹಿಂಪಡೆತ: ದ.ಸಂ.ಸ. ಹೋರಾಟಕ್ಕೆ ಸಂದ ಜಯ: ಸುಂದರ ಮಾಸ್ತರ್ - Mahanayaka

ವೇದ ಗಣಿತ ಹಿಂಪಡೆತ: ದ.ಸಂ.ಸ. ಹೋರಾಟಕ್ಕೆ ಸಂದ ಜಯ: ಸುಂದರ ಮಾಸ್ತರ್

sundar master
15/10/2022


Provided by

ಕರ್ನಾಟಕ ಸರಕಾರವು ಹೊರಡಿಸಿದ್ದ ವೇದ ಗಣಿ ಕಲಿಕೆ ಕಾರ್ಯಕ್ರಮವನ್ನು ಹಿಂತೆಗೆದುಕೊಂಡಿರುವುದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಹೋರಾಟಕ್ಕೆ ಸಂದ ಜಯ ಎಂದು ದ.ಸಂ.ಸ.ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ  ಸುಂದರ ಮಾಸ್ತರ್ ತಿಳಿಸಿದರು.

ಇತ್ತೀಚೆಗೆ ಕರ್ನಾಟಕ ಸರಕಾರ ಜಾರಿಗೆ ತಂದಿದ್ದ ಪರಿಶಿಷ್ಟರ ಮೀಸಲು ನಿಧಿ  SCSP ಹಾಗೂ TSP ಯಿಂದ 70 ಕೋಟಿ ರೂಪಾಯಿಯನ್ನು ವೇದ ಗಣಿತ ಕಲಿಕೆಗೆ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಉಡುಪಿಯ ರಾಜ ಬೀದಿಗಳಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶರವರ ಅಣುಕು ಶವಯಾತ್ರೆ ನಡೆಸಿ ಹುತಾತ್ಮ ಚೌಕದ ಬಳಿ ಪ್ರತಿಕ್ರತಿ ಶವವನ್ನು ದಹಿಸಿ ಉಗ್ರ ಪ್ರತಿಭಟನೆ ನಡೆಸಲಾಗಿತ್ತು ಎಂದರು.

ಸತ್ತೋಲೆಯನ್ನು ವಾಪಾಸು ಪಡೆದದ್ದಕ್ಕೆ ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಅಣ್ಣಪ್ಪ ನಕ್ರೆ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಗೋಪಾಲಕ್ರಷ್ಣ ಕುಂದಾಪುರ, ಖಜಾಂಚಿ ಶ್ರೀಧರ್ ಕುಂಜಿಬೆಟ್ಟು ಸಂತಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ