ಬಾಲಿವುಡ್ ನ ಹಿರಿಯ ನಟ ‘ಹೀ—ಮ್ಯಾನ್’ ಧರ್ಮೇಂದ್ರ ನಿಧನ - Mahanayaka
11:29 PM Monday 24 - November 2025

ಬಾಲಿವುಡ್ ನ ಹಿರಿಯ ನಟ ‘ಹೀ—ಮ್ಯಾನ್’ ಧರ್ಮೇಂದ್ರ ನಿಧನ

dharmendra
24/11/2025

ಮುಂಬೈ: 89 ವರ್ಷ ವಯಸ್ಸಿನ ಹಿರಿಯ ಬಾಲಿವುಡ್ ನಟ ಧರ್ಮೇಂದ್ರ(Dharmendra )ಅವರು  ಸೋಮವಾರ ನಿಧನರಾಗಿದ್ದಾರೆ.

ಶೋಲೆ, ಚುಪ್ಕೆ– ಚುಪ್ಕೆ, ಬಾಂಧಿನಿ, ಸತ್ಯಕಾಮ್ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ಧರ್ಮೇಂದ್ರ  ನಟಿಸಿದ್ದಾರೆ. 2004ರಲ್ಲಿ ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಅವರು ಪದಾರ್ಪಣೆ ಮಾಡಿದ್ದರು. ಪದ್ಮಭೂಷಣ, ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಅವರು ಪತ್ನಿ ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್‌ ಪುತ್ರಿಯರಾದ ವಿಜೇತಾ, ಅಜೀತಾ, ಇಶಾ ಮತ್ತು ಅಹಾನಾ ಅವರನ್ನು ಅಗಲಿದ್ದಾರೆ.

ಧರ್ಮೇಂದ್ರ ಕೃಷ್ಣಡಿಯೋಲ್ ಅವರು ಡಿಸೆಂಬರ್ 8, 1935ರಂದು ಪಂಜಾಬ್‌ ಲುಧಿಯಾನ ಜಿಲ್ಲೆಯ ನಸ್ರಾಲಿಯಲ್ಲಿ ಪಂಜಾಬಿ ಜಾಟ್ ಕುಟುಂಬದಲ್ಲಿ ಜನಿಸಿದರು. ಅವರು ಸವಾಲ್‌ ಗೆ ತೆರಳಿ ಲುಧಿಯಾನದ ಲಾಲ್‌ ಟನ್‌ ಕಲಾನ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಹಿಂದಿ ಸಿನಿಮಾದಲ್ಲಿ ಅವರು ನಿರ್ವಹಿಸಿದ ಅದ್ಭುತ ಮೈಕಟ್ಟು ಮತ್ತು ಸಾಹಸ ಪಾತ್ರಗಳಿಗಾಗಿ ಅವರು ಹೀ–ಮ್ಯಾನ್ ಎಂಬ ಹೆಸರನ್ನು ಪಡೆದಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ