ಶರಣ್ ಪಂಪ್ ವೆಲ್ ಬಗ್ಗೆ ಮಾನಹಾನಿಕರ ಸುಳ್ಳು ಸುದ್ದಿಯ ವಿರುದ್ಧ ಕ್ರಮಕ್ಕೆ ವಿಎಚ್ ಪಿ ಮನವಿ - Mahanayaka

ಶರಣ್ ಪಂಪ್ ವೆಲ್ ಬಗ್ಗೆ ಮಾನಹಾನಿಕರ ಸುಳ್ಳು ಸುದ್ದಿಯ ವಿರುದ್ಧ ಕ್ರಮಕ್ಕೆ ವಿಎಚ್ ಪಿ ಮನವಿ

Sharan pump well 1
13/07/2023


Provided by

ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಮಾನಹಾನಿಕರ ಸುಳ್ಳು ಸುದ್ದಿಯ ವೀಡಿಯೋಗಳನ್ನು ಹರಿಯಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ವಿಶ್ವಹಿಂದೂ ಪರಿಷತ್ ಮಂಗಳೂರು ವತಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಮನವಿ ಸ್ವೀಕರಿಸಿದರು. ವಿಎಚ್ ಪಿ ಕರ್ನಾಟಕ ದ. ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಕಾರ್ಯದರ್ಶಿ ಶಿವಾನಂದ ಮೆಂಡನ್, ಪ್ರಮುಖರಾದ ಪುನೀತ್ ಅತ್ತಾವರ, ಭುಜಂಗ ಕುಲಾಲ್, ಸಂತೋಷ್ ಕದ್ರಿ, ಮನೋಹರ್ ಸುವರ್ಣ ಉಪಸ್ಥಿತರಿದ್ದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ