‘ನಾನು ನಂದಿನಿ’ ಖ್ಯಾತಿಯ ವಿಕ್ಕಿಪಿಡಿಯಾ ವಿಕಾಸ್ ಗೆ ಕಾನೂನಿನ ಸಂಕಷ್ಟ!: ವಿಕಾಸ್ ಮಾಡಿದ ತಪ್ಪಾದ್ರೂ ಏನು? - Mahanayaka
3:41 PM Saturday 10 - January 2026

‘ನಾನು ನಂದಿನಿ’ ಖ್ಯಾತಿಯ ವಿಕ್ಕಿಪಿಡಿಯಾ ವಿಕಾಸ್ ಗೆ ಕಾನೂನಿನ ಸಂಕಷ್ಟ!: ವಿಕಾಸ್ ಮಾಡಿದ ತಪ್ಪಾದ್ರೂ ಏನು?

vickypedia the gagster
11/07/2024

ಬೆಂಗಳೂರು: ‘ನಾನು ನಂದಿನಿ ಬೆಂಗಳೂರು ಬಂದಿನಿ’ ಎಂಬ ರೀಲ್ಸ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ವಿಕ್ಕಿಪಿಡಿಯಾ(Vickypedia The Gagster) ಕ್ರಿಯೇಟರ್ ವಿಕಾಸ್ ಗೆ ಸಂಕಷ್ಟ ಎದುರಾಗಿದೆ.

ವಿಕ್ಕಿಪೀಡಿಯಾ ವಿಕಾಸ್ ಡ್ರಗ್ಸ್ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತ ರೀಲ್ಸ್​ ವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ವಿಕ್ಕಿಪೀಡಿಯಾ ವಿಕಾಸ್​ ಬೈಯಪ್ಪನಹಳ್ಳಿ ಪೊಲೀಸ್​ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

ಮಾದಕ ವ್ಯಸನಕ್ಕೆ ಪ್ರೇರೇಪಿಸುವ ಯಾವುದೇ ವಿಡಿಯೋಗಳನ್ನು  ಕ್ರಿಯೇಟ್ ಮಾಡದಂತೆ ವಿಕಾಸ್ ಗೆ ಎಚ್ಚರಿಕೆ ನೀಡಿದ್ದು, ವಿಕಾಸ್ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ಆರಂಭದಲ್ಲಿ ಉತ್ತಮ ಸಂದೇಶಗಳನ್ನು ಕೊಡುವ ಹಾಗೂ ಮನರಂಜನೀಯ ವಿಡಿಯೋಗಳನ್ನು ನೀಡುತ್ತಿದ್ದ ವಿಕ್ಕಿಪಿಡಿಯಾ ನಂತರ ಟ್ರೆಂಡ್ ಗಳ ಹಿಂದೆ ಬಿದ್ದಿತ್ತು. ಇದರ ಬೆನ್ನಲ್ಲೇ ಕಾನೂನಿನ ಸಂಕಷ್ಟಕ್ಕೆ ಕೂಡ ಸಿಲುಕಿದೆ.

ಅಂದ ಹಾಗೆ ವಿಕ್ಕಿಪೀಡಿಯಾ ಮಾತ್ರವಲ್ಲ, ಯಾವುದೇ ಕ್ರಿಯೇಟರ್ಸ್ ಮಾದಕ ವ್ಯಸನ(ಡ್ರಗ್ಸ್)ಗಳಿಗೆ ಪ್ರೇರೇಪಿಸುವ ವಿಡಿಯೋಗಳನ್ನು ಮಾಡಿದರೆ ನಿಮಗೂ ಕಾನೂನಿನ ಸಂಕಷ್ಟ ಎದುರಾಗಬಹುದು. ಹಾಗಾಗಿ ಯಾವುದೇ ರೀಲ್ಸ್ ಗಳನ್ನು ಮಾಡುವಾಗ ನಮ್ಮ ದೇಶದ ಕಾನೂನಿನ ವ್ಯಾಪ್ತಿಯಲ್ಲೇ ಮಾಡಿದರೆ ಉತ್ತಮ ಇಲ್ಲವಾದರೆ ಇಲ್ಲದ ರಗಳೆಗಳಿಗೆ ಸಿಲುಕೋದಂತೂ ಗ್ಯಾರೆಂಟಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ