ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡದೇ ಅಪಮಾನ ಮಾಡಿದ ಫ್ರಾನ್ಸ್ ಅಧ್ಯಕ್ಷ: ವೀಡಿಯೋ ವೈರಲ್ - Mahanayaka

ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡದೇ ಅಪಮಾನ ಮಾಡಿದ ಫ್ರಾನ್ಸ್ ಅಧ್ಯಕ್ಷ: ವೀಡಿಯೋ ವೈರಲ್

12/02/2025


Provided by

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಲಾಘವ ಮಾಡದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ಯಾರಿಸ್‌ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಈ ಘಟನೆ ನಡೆದಿದೆ.

ಮ್ಯಾಕ್ರನ್ ಅವರ ಜನಾಂಗೀಯ ಪ್ರಜ್ಞೆಯನ್ನು ವಿರೋಧಿಸಿ ಮತ್ತು ಮೋದಿಯನ್ನು ಲೇವಡಿ ಮಾಡುವ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೀಡಿಯೋದಲ್ಲಿ ಮೋದಿಯ ಎಡ, ಬಲ, ಹಿಂದೆ ಎಲ್ಲ ವಿಶ್ವ ನಾಯಕರ ಕೈಕುಲುಕಿದ ಮ್ಯಾಕ್ರನ್, ತನ್ನ ಕಡೆಗೆ ಕೈ ಚಾಚಿದ ಮೋದಿಯನ್ನು ನೋಡದವರಂತೆ ಮುಂದಿನ ವ್ಯಕ್ತಿಗೆ ಕೈಕುಲುಕಿದ್ದಾರೆ. ಇದಾದ ಬಳಿಕ ಮೋದಿ ಜನರನ್ನು ನಗಿಸಲು ಕೈ ಬೀಸುತ್ತಿರುವುದನ್ನು ಕಾಣಬಹುದು. ಬಳಿಕ ಸಮೀಪದಲ್ಲಿದ್ದ ಮಹಿಳೆ ಮೋದಿ ಕೈ ಕುಲುಕಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ