ವಿಧಾನಸಭೆಯಲ್ಲಿ ತನ್ನ ಆತ್ಮಹತ್ಯೆ ಯತ್ನದ ವಿಚಾರವನ್ನು ತಾನೇ ಹೇಳಿದ ಬಿಜೆಪಿ ಶಾಸಕ! - Mahanayaka
11:15 AM Thursday 21 - August 2025

ವಿಧಾನಸಭೆಯಲ್ಲಿ ತನ್ನ ಆತ್ಮಹತ್ಯೆ ಯತ್ನದ ವಿಚಾರವನ್ನು ತಾನೇ ಹೇಳಿದ ಬಿಜೆಪಿ ಶಾಸಕ!

13/03/2021


Provided by

ಭುವನೇಶ್ವರ್:  ರಾಜ್ಯದಲ್ಲಿ ಭತ್ತ ಸಂಗ್ರಹಣೆಗೆ ಸಂಬಂಧಿಸಿದ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯಲು ತಾನು ವಿಧಾನ ಸಭೆಯಲ್ಲಿ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಬಿಜೆಪಿ ಶಾಸಕ ಸುಭಾಶ್ ಪನಿಗ್ರಾಹಿ ಸ್ವತಃ ತಿಳಿಸಿದ್ದಾರೆ.

ಡೇಬ್‌ಗಬ್‌ ಪ್ರದೇಶದಲ್ಲಿ ಭತ್ತದ ಸಂಗ್ರಹಣೆ ನಡೆಯುತ್ತಿಲ್ಲ. 2 ಲಕ್ಷ ಕ್ವಿಂಟಾಲ್‌ನಷ್ಟು ಭತ್ತ ಮಾರಾಟವಾಗದೇ ಬಿದ್ದಿದೆ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಮ್ಮ ಆತ್ಮಹತ್ಯೆ ಯತ್ನದ ವಿಚಾರವನ್ನು ತಾವೇ ತಿಳಿಸಿದ್ದಾರೆ.

ಒಡಿಶಾ ವಿಧಾನಸಭೆಯಲ್ಲಿ ಫೆಬ್ರುವರಿ 18 ರಂದು ಬಜೆಟ್‌ ಅಧಿವೇಶನ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಏಪ್ರಿಲ್‌ 9ರ ವರೆಗೆ ನಡೆಯಲಿದೆ. ಫೆಬ್ರುವರಿ 22 ರಂದು ಬಜೆಟ್‌ ಮಂಡನೆಯಾಗಿದೆ.

subhash panigrahi

ಇತ್ತೀಚಿನ ಸುದ್ದಿ