ವಿದ್ಯಾಭಾರತಿ ಮಾಹಿತಿ ಪರಿಚಯ ಮತ್ತು ವಿದ್ಯಾಭಾರತಿ ಪ್ರಾರ್ಥನೆ ಅಭ್ಯಾಸ ವರ್ಗ ಕಾರ್ಯಾಗಾರ - Mahanayaka

ವಿದ್ಯಾಭಾರತಿ ಮಾಹಿತಿ ಪರಿಚಯ ಮತ್ತು ವಿದ್ಯಾಭಾರತಿ ಪ್ರಾರ್ಥನೆ ಅಭ್ಯಾಸ ವರ್ಗ ಕಾರ್ಯಾಗಾರ

vidyabharati
08/11/2021


Provided by

ಪಟ್ಲ: ಯು.ಎಸ್. ನಾಯಕ ಪ್ರೌಢಶಾಲೆ ‌ಪಟ್ಲದಲ್ಲಿ  ಶನಿವಾರ ವಿದ್ಯಾಭಾರತಿ ಪರಿಚಯ ಮಾಹಿತಿ ಮತ್ತು ವಿದ್ಯಾಭಾರತಿ ಪ್ರಾರ್ಥನೆಯ ಅಭ್ಯಾಸ ವರ್ಗದ ಕಾರ್ಯಾಗಾರ ನಡೆಯಿತು.

ಉಡುಪಿ ಜಿಲ್ಲೆ  ವಿದ್ಯಾಭಾರತಿ ಕರ್ನಾಟಕ ಈ ಕಾರ್ಯಾಗಾರವನ್ನು ಆಯೋಜಿಸಿತ್ತು. ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಶಾಲೆಗಳ ಗುರೂಜಿ ಮಾತಾಜಿಯವರಿಗೆ  ವಿದ್ಯಾಭಾರತಿ ಕರ್ನಾಟಕದ ಹುಟ್ಟು, ಬೆಳವಣಿಗೆ , ಶೈಕ್ಷಣಿಕ ರಂಗದಲ್ಲಿ ಅದರ ಧ್ಯೇಯ್ಯೋದ್ಧೇಶಗಳು ಆಡಳಿತಾತ್ಮಕ ವಿಭಾಗ ಮತ್ತು ಶೈಕ್ಷಣಿಕ ವಾಗಿ ಶಿಕ್ಷಕರಿಗೆ, ಬೋಧಕೇತರ ವರ್ಗದವರಿಗೆ ,ಆಡಳಿತ ಮಂಡಳಿ, ಪೋಷಕರಿಗೆ ದೊರಕುವ  ಪ್ರಯೋಜನವನ್ನು ಶ್ರೀ ಮಹೇಶ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ತಿಳಿಸಿದರು.ಕಾರ್ಯಾಗಾರ ಎರಡು ಅವಧಿಯಲ್ಲಿ ನಡೆಯಿತು‌

ಮೊದಲ ಅವಧಿಯಲ್ಲಿ ವಿದ್ಯಾಭಾರತಿ ಕರ್ನಾಟಕ ಪರಿಚಯ  ಮಾಹಿತಿವನ್ನು  ತಿಳಿಸಲಾಯಿತು. ಅವಧಿ ಎರಡರಲ್ಲಿ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಶಾಲೆಗಳಲ್ಲಿ ವಿದ್ಯಾಭಾರತಿ ನಿಗಧಿಪಡಿಸಿದ ಶಾಲಾ ಆರಂಭದ ನಿತ್ಯದ ಪ್ರಾರ್ಥನೆ ಮತ್ತು  ಹಿಂದಿ ಸಂಸ್ಕೃತ, ವಾರ್ಷಿಕ ಗೀತೆ,ಭೋಜನ‌ಮಂತ್ರ, ಶಾಂತಿಮಂತ್ರ, ಐಕ್ಯ ಮಂತ್ರ,  ಭಗವದ್ಗೀತೆಯ ಕೆಲವು ಶ್ಲೋಕ ಹಾಡಿಸಿ ಅಭ್ಯಾಸ ಮಾಡಿಸಲಾಯಿತು.

ಪ್ರಾರ್ಥನೆಯ ಅಭ್ಯಾಸ ಅವಧಿಯನ್ನು ವಿಮಲ‌ ಮಾತಾಜಿ ಮತ್ತು ಹೇಮಾ ಮಾತಾಜಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ನಿರ್ವಹಿಸಿದರು. ಅಧ್ಯಕ್ಷತೆ ವಹಿಸಿದ ಪಾಂಡುರಂಗ ಪೈ ಸಿದ್ಧಾಪುರ ,ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮಾತನಾಡಿ, ಪ್ರಾರ್ಥನೆ ದಿನದ ಆರಂಭದ ಚೈತನ್ಯ ಶಕ್ತಿ ಯಾಗಿದೆ. ಆದ್ದರಿಂದ ಅತ್ಯಂತ ಶ್ರದ್ಧೆ ಭಕ್ತಿ ಯಿಂದ  ಸ್ತುತಿಸಬೇಕು ಎಂದರು.

ಯು.ಎಸ್. ನಾಯಕ್ ಪಟ್ಲ  ಶಾಲೆಯ ಸಂಚಾಲಕರು ನಾರಾಯಣ ಶೆಣೈ  ಜ್ಯೋತಿ ಬೆಳಗಿಸಿ  ಕಾರ್ಯಾಗಾರವನ್ನು  ಉದ್ಘಾಟಿಸಿದರು .ಅನಂತರ‌ ಉದ್ಘಾಟನಾ ಮಾತಿನಲ್ಲಿ  ವಿದ್ಯಾಭಾರತಿ ತನ್ನ ಸಂಯೋಜಿತ ಶಾಲೆಗಳಿಗೆ ಈ ಕಾರ್ಯಾಗಾರ ಉಪಯುಕ್ತವಾಗಿದೆ. ಶಿಕ್ಷಕರಿಗೆ ಅಧ್ಯಯನ ಶೀಲ ಗುಣವಿರಬೇಕು. ಯಾವುದಾದರೂ ಸಾಹಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವ ಪ್ರವೃತ್ತಿ ಇರವುದು ಉತ್ತಮ ಎಂದರು.

ಶ್ರೀಕಾಂತ ಪ್ರಭು ಮುಖ್ಯೋಪಾಧ್ಯಾಯ ಯು.ಎಸ್ .ನಾಯಕ್ ಪ್ರೌಢಶಾಲೆ ಪಟ್ಲ  ಉಪಸ್ಥಿತರಿದ್ದರು. ಕಾರ್ಯಾಗಾರ ದಲ್ಲಿ ಜನಾರ್ದನ ಶಾಲೆ ಎಳ್ಳಾರೆ, ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ, ಗಣಪತಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಪಟ್ಲ, ಲೋಕಮಾನ್ಯತಿಲಕ್ ಹಿರಿಯ ಪ್ರಾಥಮಿಕ ಶಾಲೆ ಪಟ್ಲ  ಯು.ಎಸ್. ನಾಯಕ್  ಅನುದಾನಿತ ಪ್ರೌಢಶಾಲೆ ಪಟ್ಲ  ಸಂಸ್ಥೆಯ ಗುರೂಜಿ ಮಾತಾಜಿಯವರು  ಉಪಸ್ಥಿತರಿದ್ದು ತರಬೇತಿ ಪಡೆದರು. ಅತಿಥೇಯ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ‌, ಜನಾರ್ದನ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಉಪಸ್ಥಿತರಿದ್ದರು.ಸ್ವಾಗತ ಸಂಸ್ಥೆಯ ಮುಖ್ಯೋಪಾಧ್ಯಾಯರು ಶ್ರೀಕಾಂತ ಪ್ರಭು,  ನಿರೂಪಣೆ ಮತ್ತು ಧನ್ಯವಾದವನ್ನು ನಟರಾಜ್ ಶಿಕ್ಷಕರು ಯು.ಎಸ್ ನಾಯಕ್ ಪ್ರೌಢಶಾಲೆ ಪಟ್ಲ ನಿರ್ವಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ