ಇನ್ನೂ ವಿದ್ಯುತ್ ಕಂಬಗಳಲ್ಲಿ ಹಾರಾಡುತ್ತಿವೆ ಹರಿದ ರಾಷ್ಟ್ರ ಧ್ವಜಗಳು! - Mahanayaka

ಇನ್ನೂ ವಿದ್ಯುತ್ ಕಂಬಗಳಲ್ಲಿ ಹಾರಾಡುತ್ತಿವೆ ಹರಿದ ರಾಷ್ಟ್ರ ಧ್ವಜಗಳು!

mudde bihal
07/09/2022


Provided by

ಮುದ್ದೇಬಿಹಾಳ: ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ (ಹರ್ ಘರ್ ತಿರಂಗ ಉತ್ಸವ) ಎಲ್ಲೆಡೆ ರಾಷ್ಟ್ರ ಧ್ವಜಗಳನ್ನು ಎಲ್ಲೆಡೆ ಹಂಚಿಕೆ ಮಾಡಲಾಗಿತ್ತು. ಜೊತೆಗೆ ಪ್ರತಿ ಮನೆ ಮನೆಗಳ ಮೇಲೂ ಧ್ವಜಗಳ ಹಾರಾಟದ ಮೂಲಕ ರಾಷ್ಟ್ರಭಕ್ತಿ ಮೆರೆಯಲಾಗಿತ್ತು.

ಜೊತೆಗೆ ಸರ್ಕಾರದ ನಿಯಮಾವಳಿಯ ಪ್ರಕಾರ ಕೆಲವು ನಿಬಂಧನೆಗಳನ್ನು ವಿಧಿಸಲಾಗಿತ್ತು. ಕಾರ್ಯಕ್ರಮದ ಬಳಿಕ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಪ್ರತಿ ಗ್ರಾಮಗಳಿಗೆ ತೆರಳಿ ರಾಷ್ಟ್ರ ಧ್ವಜಗಳನ್ನು ತೆರವುಗೊಳಿಸಿಸಿದ್ದರು. ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು,  ಸ್ವಾತಂತ್ರ್ಯ ದಿನಾಚರಣೆ ಮುಗಿದು ತಿಂಗಳಾಗುತ್ತಾ ಬಂದರೂ ವಿದ್ಯುತ್ ಕಂಬಗಳಲ್ಲಿ ರಾಷ್ಟ್ರಧ್ವಜಗಳು ಅವಮಾನಕರವಾಗಿ ಹಾರಾಡುತ್ತಿರುವುದು ಕಂಡು ಬಂದಿದೆ.

ಮುದ್ದೇಬಿಹಾಳ ನಗರದ ನಾರಾಯಣಪುರ ರಸ್ತೆಯ ಮಧ್ಯೆ ಇರುವ ವಿದ್ಯುತ್ ಕಂಬಗಳಲ್ಲಿ ಹರಿದ ಧ್ವಜಗಳು ಹಾರಾಡುತ್ತಿರುವುದು ಕಂಡು ಬಂದಿದೆ. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ