ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ  ‘ಮಲಗಿದ್ದವರು ಮತ್ತೆ ಎದ್ದೇಳಿಲ್ಲ’: ವಿಜಯ್ ಸಹೋದರ ಶ್ರೀ ಮುರುಳಿ ಮಾಹಿತಿ - Mahanayaka
1:06 AM Saturday 18 - October 2025

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ  ‘ಮಲಗಿದ್ದವರು ಮತ್ತೆ ಎದ್ದೇಳಿಲ್ಲ’: ವಿಜಯ್ ಸಹೋದರ ಶ್ರೀ ಮುರುಳಿ ಮಾಹಿತಿ

vijaya raghavendra wife
07/08/2023

ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ನಿಧನರಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಸಹೋದರ ನಟ ಶ್ರೀಮುರುಳಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.


Provided by

“ನನ್ಗೆ ಅಣ್ಣ ಫೋನ್ ಮಾಡಿ ಹೇಳಿರೋದಿಷ್ಟೆ… ಅತ್ತಿಗೆ ಕಸಿನ್ ಜೊತೆಗೆಲ್ಲ ಟ್ರಿಪ್ ಹೋಗಿದ್ದಾರೆ. ಅಣ್ಣ ಶೂಟಿಂಗ್ ಮುಗಿಸಿಕೊಂಡು ಹೋಗಿ ಜಾಯಿನ್ ಆಗಿದ್ದಾರೆ.  ಟೈಮ್ ಸ್ಪೆಂಡ್ ಮಾಡ್ಬೇಕಾದ್ರೆ… ಮಲಗಿದ್ದವರು ಮತ್ತೆ ಎದ್ದೇಳಿಲ್ಲ… ಇದು ಲೋ ಬಿಪಿ ಅಂತ ಅಂದ್ಕೊಳ್ತೇನೆ… ಬಂದ ಮೇಲೆ ಬಾಕಿದ್ದೆಲ್ಲ ಡೀಟೇಲ್ಸ್ ಗೊತ್ತಾಗುತ್ತೆ. ಇದಾಗಿರೋದು ನಿಜ” ಎಂದು ಮುರುಳಿ ತಿಳಿಸಿದ್ದಾರೆ.

ನಿವೃತ್ತ ಪೊಲೀಸ್‌ ಅಧಿಕಾರಿ ಡಿ.ಕೆ.ಶಿವರಾಮ್‌ ಅವರ ಮಗಳಾಗಿದ್ದ ಸ್ಪಂದನಾ ಅವರು 2007ರಲ್ಲಿ ಕನ್ನಡ ಚಿತ್ರರಂಗದ ನಟರಾಗಿದ್ದ ವಿಜಯ ರಾಘವೇಂದ್ರ ಅವರನ್ನು ವಿವಾಹವಾಗಿದ್ದರು. ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಸ್ಪಂದನಾ ಸದ್ಯ ಬೆಂಗಳೂರಿನಲ್ಲಿ ವಾಸವಿದ್ದರು.ಸ್ಪಂದನ, ರವಿಚಂದ್ರನ್‌ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಪೂರ್ವ ಸಿನಿಮಾದಲ್ಲಿ ರವಿಚಂದ್ರನ್‌ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವಿಜಯ್ ರಾಘವೇಂದ್ರ ಅಭಿನಯದ ಕೆಲ ಸಿನಿಮಾಗಳಲ್ಲಿ ನಿರ್ಮಾಪಕಿಯಾಗಿ ಸಹ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ