ಒಂದು ಲೋಟ ನೀರು ಕುಡಿದದ್ದಕ್ಕೆ ವಿಕಲಚೇತನನನ್ನು ಹೊಡೆದು ಕೊಂದ ಪಾಪಿಗಳು - Mahanayaka

ಒಂದು ಲೋಟ ನೀರು ಕುಡಿದದ್ದಕ್ಕೆ ವಿಕಲಚೇತನನನ್ನು ಹೊಡೆದು ಕೊಂದ ಪಾಪಿಗಳು

begusarai
06/06/2021


Provided by

ಪಾಟ್ನಾ: ತೀವ್ರ ಬಾಯಾರಿಕೆಯಿಂದ ಒಂದು ಲೋಟ ನೀರು ಕುಡಿದಿದ್ದಕ್ಕಾಗಿ ವಿಕಲಚೇತನ ವ್ಯಕ್ತಿಯೋರ್ವರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಬೇಗುಸರೈ ಜಿಲ್ಲೆಯ ಬಡೆಪುರ ಗ್ರಾಮದಲ್ಲಿ ನಡೆದಿದೆ.

50 ವರ್ಷ ವಯಸ್ಸಿನ ಚೋಟೆ ಲಾಲ್ ಅವರು ತೀವ್ರ ಬಡ ಕುಟುಂಬದವರಾಗಿದ್ದಾರೆ. ಇದರ ಜೊತೆಗೆ ಅವರು ವಿಕಲ ಚೇತನರೂ ಆಗಿದ್ದಾರೆ. ಜೀವನೋಪಾಯಕ್ಕಾಗಿ ತಮ್ಮ ಹಳ್ಳಿಯ ಬಳಿಯ ಕೊಳಕ್ಕೆ ಮೀನು ಹಿಡಿಯಲು ಅವರು ತೆರಳಿದ್ದರು. ಅಲ್ಲಿಂದ ಹಿಂದಿರುಗುವ ವೇಳೆ  ತೀವ್ರ ಬಾಯಾರಿದ್ದು, ಇಲ್ಲಿನ ದಿನೇಶ್ ಸಹಾನಿ ಎಂಬಾತನಿಗೆ ಸೇರಿದ ಮಡಕೆಯಿಂದ ಒಂದು ಲೋಟ ನೀರನ್ನು ಅವರು ಕುಡಿದಿದ್ದಾರೆ.

ನೀರು ಕುಡಿಯುತ್ತಿದ್ದ ಚೋಟೆ ಲಾಲ್ ನಲ್ಲಿ ನೋಡಿದ ದಿನೇಶ್ ಸಹಾನಿ ಹಾಗೂ ಆತನ ಮಗ ದೀಪಕ್ ಸಹಾನಿ, ಚೋಟೆ ಲಾಲ್ ಒಬ್ಬರು ವಿಕಲಚೇತನರು ಎನ್ನುವುದನ್ನೂ ನೋಡದೇ ನಿರ್ದಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದರಿಂದಾಗಿ ಚೋಟೆ ಲಾಲ್ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.

ಚೋಟೆಲಾಲ್ ಅವರ ಪತ್ನಿಗೆ ವಿಚಾರ ತಿಳಿದು ಸ್ಥಳಕ್ಕೆ ಬಂದು ಗ್ರಾಮಸ್ಥರ ನೆರವಿನೊಂದಿಗೆ ತಮ್ಮ ಪತಿಯನ್ನು  ಬೆಗುಸರಾಯ್ ನ ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದರಿಂದ ವೈದ್ಯರ ಸಲಹೆಯ ಮೆರೆಗೆ ಅಲ್ಲಿಂದ ಮತ್ತೆ ಪಿಎಂಸಿಎಚ್ ಗೆ ಕರೆದೊಯ್ದಿದ್ದಾರೆ. ಆದರೆ, ಚೋಟೆಲಾಲ್ ಅವರು ಕರುಣೆ, ಪ್ರೀತಿ, ಕ್ಷಮೆ, ದಯೇ ಇಲ್ಲದ ಈ ಜಗತ್ತಿಗೆ ವಿದಾಯ ಹೇಳಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚಿನ ಸುದ್ದಿ