ಹುಲಿ ದಾಳಿಗೆ ಹಸು ಸಾವು: ಹುಲಿ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ - Mahanayaka
12:08 AM Wednesday 10 - September 2025

ಹುಲಿ ದಾಳಿಗೆ ಹಸು ಸಾವು: ಹುಲಿ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ

mudigere
11/02/2023

ಕೊಟ್ಟಿಗೆಹಾರ: ಬಣಕಲ್ ‍ನ ಮತ್ತಿಕಟ್ಟೆಯಲ್ಲಿ ಹುಲಿ ದಾಳಿಗೆ ಹಸುವೊಂದು ಶುಕ್ರವಾರ  ಸಂಜೆ ಬಲಿಯಾಗಿದೆ.


Provided by

ಮತ್ತಿಕಟ್ಟೆಯ ಬ್ಲೂ ಮೌಂಟ್ ಎಸ್ಟೇಟ್ ಆನಂದ್ ಮಿಸ್ಕಿತ್ ಅವರ ಕಾಫಿ ತೋಟದಲ್ಲಿ ಮಧುಸೂದನ್ ಚಂದ್ರಾವತಿ ಪೂಜಾರಿಯವರ ಸಿಂಧಿ ಹಸುವನ್ನು ಹುಲಿ ಕೊಂದು ಹಾಕಿದೆ.ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಉಮೇಶ್,ಅರಣ್ಯ ಗಸ್ತು ಅಧಿಕಾರಿ ಜಯಪ್ಪ,ಮೋಸಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರ ಸಾಗುತ್ತಿರುವ ಹುಲಿ ದಾಳಿ:ಬಣಕಲ್ ನ ಹೆಗ್ಗುಡ್ಲು ಮತ್ತಿಕಟ್ಟೆ, ಬಿ.ಹೊಸಳ್ಳಿ, ಹೊಕ್ಕಳ್ಳಿ,ಭಾರತಿಬೈಲ್ ಭಾಗದಲ್ಲಿ ಹುಲಿ ದಾಳಿ ಸಾಗುತ್ತಿದ್ದು ಈವರೆಗೂ ಸುಮಾರು 50 ಕ್ಕೂ ಹೆಚ್ಚು ದನಗಳು ಹುಲಿ ಪಾಲಾಗಿವೆ.ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.ಹಲವು ಬಾರಿ ಹುಲಿ ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಹುಲಿ ಸೆರೆಗೆ ಸಿಸಿ ಕ್ಯಾಮೆರಾ ಕಣ್ಘಾವಲು ಹಾಕಿದರೂ ಹುಲಿಯನ್ನು ಸ್ಥಳಾಂತರ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಹುಲಿ  ದಾಳಿಯನ್ನು ನಿಯಂತ್ರಿಸಲು ಹುಲಿ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥ ಎಚ್.ಟಿ.ಪ್ರಸನ್ನ ಒತ್ತಾಯಿಸಿದ್ದಾರೆ.

‘ಹುಲಿ ಸ್ಥಳಾಂತರಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಆದೇಶ ಬರಬೇಕಿದೆ’

-ಉಮೇಶ್, ಉಪ ವಲಯ ಅರಣ್ಯಾಧಿಕಾರಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ