ರಸ್ತೆಯಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು ಉಪಚರಿಸಿದ ವಿನಯ್‌ ಕುಮಾರ್ ಸೊರಕೆ - Mahanayaka
10:58 AM Tuesday 11 - November 2025

ರಸ್ತೆಯಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು ಉಪಚರಿಸಿದ ವಿನಯ್‌ ಕುಮಾರ್ ಸೊರಕೆ

vinai kumar sorake
29/04/2023

ಕಾಪು: ಮತಯಾಚನೆ ಸಂದರ್ಭದಲ್ಲಿ  ಕಾಪು ಕ್ಷೇತ್ರ ಮಟ್ಟುವಿನಲ್ಲಿ ರಸ್ತೆ ಮಧ್ಯದಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು  ಎತ್ತಿ ಉಪಚರಿಸಿದ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾನವೀಯತೆ ಮೆರೆಯುವ ಮೂಲಕ ರಾಜಕೀಯ ರಂಗಕ್ಕೆ ಮಾದರಿಯಾಗಿದ್ದಾರೆ.

ಕಾಪು ಕ್ಷೇತ್ರದ ಮಟ್ಟು ಮಹಾಂಕಾಳಿ ಮಂತ್ರದೇವತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿದ್ದ ಮಟ್ಟುವಿನ‌ ಮಹಿಳೆ ಮೋಹಿನಿಯವರು ಬಿಸಿಲ ಜಳಕ್ಕೆ ತಲೆತಿರುಗಿ ರಸ್ತೆ ಮಧ್ಯದಲ್ಲಿ ಮೂರ್ಚೆ ಹೋಗಿ ಬಿದ್ದಿದ್ದರು.  ನಂತರ ಮೋಹಿನಿಯವರನ್ನು ಎತ್ತಿ ಉಪಚರಿಸಿದ ಸೊರಕೆಯವರು ನೀರನ್ನು‌ ನೀಡಿ‌ ಸಂತೈಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್, ಪ್ರಮೀಳ‌ ಜತ್ತನ್, ದಯಾನಂದ ಬಂಗೇರ, ಕಿಶೋರ್ ಅಂಬಾಡಿ, ಅಖಿಲೇಶ್, ಸುಶೀಲ್ ಬೋಳಾರ್, ವಿಕ್ರಂ ಕಾಪು ಮೊದಲಾದವರು ಸೊರಕೆಯವರಿಗೆ ಸಾಥ್ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ