ವಿಶೇಷವಾಗಿ ವಿನ್ಯಾಸ ಮಾಡಿದ ಪಾದರಕ್ಷೆಯಲ್ಲಿ ಚಿನ್ನ ಸಾಗಾಟ | ಇಬ್ಬರು ವಶಕ್ಕೆ - Mahanayaka
6:28 PM Thursday 16 - October 2025

ವಿಶೇಷವಾಗಿ ವಿನ್ಯಾಸ ಮಾಡಿದ ಪಾದರಕ್ಷೆಯಲ್ಲಿ ಚಿನ್ನ ಸಾಗಾಟ | ಇಬ್ಬರು ವಶಕ್ಕೆ

gold
29/03/2021

ಮಂಗಳೂರು: ದುಬೈನಿಂದ ಅಕ್ರಮವಾಗಿ ವಿಶೇಷ ವಿನ್ಯಾಸ ಮಾಡಿರುವ ಪಾದರಕ್ಷೆಗಳಲ್ಲಿಟ್ಟು ಸಾಗಿಸುತ್ತಿದ್ದ 405 ಗ್ರಾಂ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದ್ದು, ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


Provided by

 ಎರಡು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಕಾಸರಗೋಡು ನಿವಾಸಿ 48 ವರ್ಷ ವಯಸ್ಸಿನ ಸುಕ್ಕುರ್ ಮೊಯಿದ್ದೀನ್ ಕುನ್ಹಿ  ಮತ್ತು 44 ವರ್ಷ ವಯಸ್ಸಿನ  ಭಟ್ಕಳದ ಮಿಸ್ರಿ ನಸೀಮುಲ್ ಗನಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಇವರು ದುಬೈನಿಂದ 18.75 ಲಕ್ಷ ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

 ಆರೋಪಿಗಳು ವಿಶೇಷವಾಗಿ ವಿನ್ಯಾಸ ಮಾಡಿದ ಪಾದರಕ್ಷೆಯ ಒಳಗೆ ಚಿನ್ನವನ್ನಿಟ್ಟು ಸಾಗಾಟ ಮಾಡುತ್ತಿದ್ದರು. ಕಸ್ಟಮ್ಸ್ ವಿಭಾಗದ ಅಧಿಕಾರಿಗಳಾದ ಡಾ. ಕಪಿಲ್ ಗಡೆ, ರಾಕೇಶ್ ಕುಮಾರ್, ಸಂದೀಪ್ ಎಂ.ಎಸ್, ಚಂದ್ರಮೋಹನ್ ಮೀನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ಇತ್ತೀಚಿನ ಸುದ್ದಿ