ಯಾಕೆ ಹೀಗೆ ಮಾಡ್ತಿದ್ದೀರಿ…! | ರೋಹಿತ್ ಶರ್ಮಾ ಫ್ಯಾನ್ಸ್ ದುರ್ವರ್ತನೆಗೆ ಮೈದಾನದಲ್ಲೇ ವಿರಾಟ್ ಕೊಹ್ಲಿ ಬೇಸರ

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ರೋಹಿತ್ ಶರ್ಮಾ ಫ್ಯಾನ್ಸ್ ನಿರಂತರವಾಗಿ ಅವಮಾನಿಸುತ್ತಲೇ ಬಂದಿದ್ದಾರೆ. ಆರಂಭದಲ್ಲೇ ಇದನ್ನು ರೋಹಿತ್ ಶರ್ಮಾ ಟೀಕಿಸಬಹುದಿತ್ತು. ಆದರೆ ಅವರು ಕೆಲವು ಸಮಯಗಳ ಬಳಿಕ ಆ ರೀತಿಯಾಗಿ ಮಾಡಬೇಡಿ ಅಂತ ಫ್ಯಾನ್ಸ್ ಗಳಿಗೆ ಮನವಿ ಮಾಡಿದ್ದರು. ಆದ್ರೆ ಇದೀಗ ವಿರಾಟ್ ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯ ಪರವಾಗಿ ನಿಂತಿದ್ದು, ರೋಹಿತ್ ಶರ್ಮಾ ಫ್ಯಾನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ನಿಂದಿಸುವುದನ್ನು ವಿರೋಧಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಜೊತೆಗೆ ಆರ್ ಸಿಬಿ ಪಂದ್ಯ ನಡೆಯುತ್ತಿದ್ದ ವೇಳೆ ಕೂಡ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ರೋಹಿತ್ ಶರ್ಮಾ ಫ್ಯಾನ್ಸ್ ಅವಮಾನಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಕೊಹ್ಲಿ ಕೈ ಸನ್ನೆಯ ಮೂಲಕ, ಯಾಕೆ ಹೀಗೆ ಮಾಡ್ತೀರಿ…? ಆ ರೀತಿ ಮಾಡಬೇಡಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ, ಅವರೂ ನಮ್ಮವರು ಎಂದು ಸಂದೇಶ ನೀಡಿದ್ದಾರೆ. ಕೊಹ್ಲಿ ಅವರ ಈ ಸನ್ನಡತೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದುಕೊಂಡು ಅವರ ಕೆಲಸವನ್ನು ಮಾಡಿದ್ದಾರೆ. ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡಲು ರೋಹಿತ್ ಶರ್ಮಾ ಅವರಿಗೆ ಹೇಳಿದ ಬಳಿಕ ಅವರನ್ನು ರೋಹಿತ್ ಶರ್ಮಾ ಫ್ಯಾನ್ಸ್ ಟೀಕಿಸಲು ಆರಂಭಿಸಿದ್ದಾರೆ. ಒಬ್ಬ ತಂಡದ ನಾಯಕನಾಗಿ ಪಾಂಡ್ಯ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಆದ್ರೆ, ಪಂದ್ಯಾಟದ ದಿನವೇ ರೋಹಿತ್ ಶರ್ಮಾ ಈ ವಿಚಾರಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದ್ದರೆ, ಇಷ್ಟೊಂದು ವಿವಾದಗಳು ಸೃಷ್ಟಿಯಾಗುತ್ತಿರಲಿಲ್ಲ, ಪಾಂಡ್ಯ ತನಗೆ ಡೈರೆಕ್ಷನ್ ಕೊಡುವ ಮಟ್ಟಕ್ಕೆ ಬೆಳೆದಿರುವುದು ಶರ್ಮಾಗೂ ಇಷ್ಟ ಇರಲಿಲ್ಲವೇ? ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು.
ಪಾಂಡ್ಯ ಕ್ಯಾಪ್ಟನ್ ಆಗಿ ತನ್ನ ಸ್ವಂತಿಕೆ ಪ್ರದರ್ಶಿಸಿದ್ದಾರೆ. ಇದರಲ್ಲಿ ಟೀಕಿಸುವಂತಹದ್ದೇನಿದೆ? ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿರುವಾಗ ಇತರ ಆಟಗಾರರಿಗೆ ಕ್ಷೇತ್ರ ರಕ್ಷಣೆ ಮಾಡಲು ಡೈರೆಕ್ಷನ್ ನೀಡಿಲ್ಲವೇ? ಹಾಗಿದ್ರೆ ಅದು ಕೂಡ ತಪ್ಪೇ? ಎನ್ನುವ ಪ್ರಶ್ನೆಗಳು ಕೂಡ ಕೇಳಿಬಂದಿವೆ. ಪಾಂಡ್ಯ ವಿರುದ್ಧ ತನ್ನ ಫ್ಯಾನ್ಸ್ ಅವಮಾನಿಸುತ್ತಿದ್ದರೂ ಬಹಳ ದಿನಗಳವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ರೋಹಿತ್ ಶರ್ಮಾ ನಿಜವಾಗಿಯೂ ಪ್ರಶ್ನೆಗೆ ಅರ್ಹರಾಗಿದ್ದಾರೆ.
🥹👏 Huge respect 👑 Kohli.#ViratKohli #MIvRCB #TATAIPL #IPL2024 #BharatArmy pic.twitter.com/bcfPg6Yxqe
— The Bharat Army (@thebharatarmy) April 11, 2024
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth