ನಾವು ಧ್ವನಿಯೆತ್ತುದಿಲ್ಲ, ವಿರೋಧ ಪಕ್ಷದಲ್ಲಿದ್ದವರು ಧ್ವನಿಯೆತ್ತಬೇಕು | ಸಿದ್ದರಾಮಯ್ಯಗೆ ಶೋಭಾ ತಿರುಗೇಟು - Mahanayaka
10:27 AM Saturday 18 - October 2025

ನಾವು ಧ್ವನಿಯೆತ್ತುದಿಲ್ಲ, ವಿರೋಧ ಪಕ್ಷದಲ್ಲಿದ್ದವರು ಧ್ವನಿಯೆತ್ತಬೇಕು | ಸಿದ್ದರಾಮಯ್ಯಗೆ ಶೋಭಾ ತಿರುಗೇಟು

shobha karandlaje
11/04/2021

ಬೆಳಗಾವಿ: ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಸಂಸತ್ ನಲ್ಲಿ ಅವರು ರಾಜ್ಯದ ಧ್ವನಿಯೆತ್ತುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.


Provided by

ಧ್ವನಿಯೆತ್ತುವ ಅಗತ್ಯವಿಲ್ಲ, ನಮ್ಮ ಕ್ಷೇತ್ರಕ್ಕೆ ಏನು ಬೇಕೋ ಅದನ್ನು ಪ್ರಧಾನಿ ಮೋದಿ ಕೊಡುತ್ತಿದ್ದಾರೆ. ಧ್ವನಿಯೆತ್ತಬೇಕಾದವರು ವಿಪಕ್ಷದಲ್ಲಿದ್ದವರು. ಆಡಳಿತ ಪಕ್ಷದಲ್ಲಿದ್ದವರು ಕೆಲಸ ಮಾಡಬೇಕು ಎಂದು ಶೋಭಾ ಸಂಸದರನ್ನು ಸಮರ್ಥಿಸಿಕೊಂಡರು.

ಇನ್ನೂ ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಳ ಸೇರಿದಂತೆ ಮೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಕೂಡ ಜಯಗಳಿಸಲಿದ್ದಾರೆ. ಮಂಗಳ ಅಂಗಡಿ  ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದ ಹೇಳಿದರು.

ಇತ್ತೀಚಿನ ಸುದ್ದಿ