ಹಳೆಯ ದ್ವೇಷಕ್ಕೆ ಬಲಿಯಾದವರು ಒಬ್ಬರಿಬ್ಬರಲ್ಲ, 6 ತಿಂಗಳ ಮಗು ಸಹಿತ ಬರೋಬ್ಬರಿ 10 ಮಂದಿ! - Mahanayaka
12:10 AM Saturday 23 - August 2025

ಹಳೆಯ ದ್ವೇಷಕ್ಕೆ ಬಲಿಯಾದವರು ಒಬ್ಬರಿಬ್ಬರಲ್ಲ, 6 ತಿಂಗಳ ಮಗು ಸಹಿತ ಬರೋಬ್ಬರಿ 10 ಮಂದಿ!

vishakhapattanam
15/04/2021


Provided by

ವಿಶಾಖಪಟ್ಟಣ: ವೈಯಕ್ತಿಕ ದ್ವೇಷಕ್ಕೆ ಇಲ್ಲಿ ಬಲಿಯಾಗಿದ್ದು, ಒಬ್ಬರು ಇಬ್ಬರಲ್ಲ, ಬರೋಬ್ಬರಿ 10 ಜನರು ಈ 10 ಜನರ ಪೈಕಿ ಇನ್ನೂ ಪ್ರಪಂಚ ಜ್ಞಾನವೇ ಇಲ್ಲದ ಆರು ತಿಂಗಳ ಮಗು ಕೂಡ ಸೇರಿದೆ. ಇಂತಹದ್ದೊಂದು ಅವಿವೇಕತನ ಮತ್ತು ಅಮಾನವೀಯ ಘಟನೆ ನಡೆದಿರುವುದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ…

ಒಂದೇ ಕುಟುಂಬದ 6 ಮಂದಿಯನ್ನು  ವಿಶಾಖಪಟ್ಟಣ ಜಿಲ್ಲೆಯ ಜುತ್ತಾಡದಲ್ಲಿ ಭೀಕರವಾಗಿ ಇರಿದು ಹತ್ಯೆ ಮಾಡಲಾಗಿದ್ದರೆ, ಇನ್ನೊಂದೆಡೆ ಮಿಥಿಲಾಪುರಿ ಉಡಾ ಕಾಲನಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಸಜೀವವಾಗಿ ದಹಿಸಿ ಹತ್ಯೆ ಮಾಡಲಾಗಿದೆ.

ರಮಣ, ಉಷಾರಾಣಿ, ರಮಾದೇವಿ, ಅರುಣ ಹಾಗೂ ಅವರ ಮಕ್ಕಳಾದ ಉದಯ, ಊರ್ಮಿಷ ಇವರನ್ನು  ಇದೇ ಕುಟುಂಬದ ಸದಸ್ಯರಲ್ಲೊಬ್ಬನಾದ ಅಪ್ಪಲರಾಜು ಎಂಬಾತ ಇರಿದು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದೇ ವ್ಯಕ್ತಿ,  ಮಿಥಲಾಪುರಿಯಲ್ಲಿ ಬಂಗಾರುನಾಯ್ಡು, ಡಾ.ನಿರ್ಮಲಾ ಮಕ್ಕಳಾದ ದೀಪಕ್, ಕಶ್ಯಪ್ ಎಂಬವರನ್ನು ಮನೆಗೆ ಬೆಂಕಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

10 ಜನರನ್ನು ಕರುಣೆಯೇ ಇಲ್ಲದೆ ಯಾಕೆ ಹತ್ಯೆ ಮಾಡಲಾಯಿತು ಎನ್ನುವ ಪ್ರಶ್ನೆಗೆ ಸಿಕ್ಕಿರುವ ಉತ್ತರ ಹಳೆಯ ದ್ವೇಷ. ಆದರೆ ಈ ವ್ಯಕ್ತಿ ಮತ್ತು ಕುಟುಂಬದ ನಡುವೆ ಏನು ದ್ವೇಷ ಇತ್ತು ಎನ್ನುವುದು ತಿಳಿದು ಬಂದಿಲ್ಲ. ಇನ್ನೊಂದೆಡೆ ಮನೆಗೆ ಬೆಂಕಿ ತಗಲಿದ್ದು, ಆಕಸ್ಮಿಕವೋ, ಆತ್ಮಹತ್ಯೆಯೋ, ಅಥವಾ ಕೊಲೆಯೋ? ಈ ಮೂರು ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ