ಮದುವೆಯ ಕರೆಯೋಲೆಯ ಮಾದರಿಯಲ್ಲಿ ‘ಮತದಾನದ ಮಮತೆಯ ಕರೆಯೋಲೆ’ - Mahanayaka
7:06 PM Tuesday 2 - September 2025

ಮದುವೆಯ ಕರೆಯೋಲೆಯ ಮಾದರಿಯಲ್ಲಿ ‘ಮತದಾನದ ಮಮತೆಯ ಕರೆಯೋಲೆ’

election
29/03/2024


Provided by

ಚಾಮರಾಜನಗರ: ದೇಶದ ಭವಿಷ್ಯಕ್ಕೆ ಪ್ರತಿಯೊಬ್ಬ ಪ್ರಜೆಯ ಮತವೂ ಅತ್ಯಂತ ಪ್ರಮುಖ್ಯವಾದದ್ದು, ಇತ್ತೀಚೆಗಿನ ದಿನಗಳಲ್ಲಂತೂ ಮತದಾನದ ಬಗ್ಗೆ ಜನರು ಸಾಕಷ್ಟು ಜಾಗೃತರಾಗಿದ್ದಾರೆ. ಆದರೂ ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಮತದಾನದ ಮಹತ್ವದ ಬಗ್ಗೆ ಇನ್ನೂ ಹೆಚ್ಚು ಜನರಲ್ಲಿ ಜಾಗೃತಿ  ಮಾಡಿಸಲಾಗುತ್ತಿದೆ.

ಬೀದಿ ನಾಟಕ, ಜಾಥಾಗಳು, ಪೋಸ್ಟರ್ ಗಳು, ಜಾಹೀರಾತುಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿರುವುದನ್ನು ನಾವು ನೋಡಬಹುದಾಗಿದೆ.  ಇದೀಗ ಜಾಮರಾಜನಗರ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮದುವೆಯ ಕರೆಯೋಲೆಯ ಮಾದರಿಯಲ್ಲಿ ಮತದಾರರಿಗೆ ಮತದಾನ ಮಾಡಲು ಕರೆಯೋಲೆ ನೀಡಿದೆ.

ಚುನಾವಣಾ ಪರ್ವ, ದೇಶದ ಗರ್ವ ಎಂಬ ಸ್ಲೋಗನ್ ನೊಂದಿಗೆ ಹಾಕಲಾಗಿರುವ ಮತದಾನದ ಕುರಿತಾದ ಜಾಗೃತಿ ಬ್ಯಾನರ್ ನಲ್ಲಿ ಮದುವೆಯ ಕರೆಯೋಲೆಯ ಮಾದರಿಯಲ್ಲಿ ಜನರನ್ನು ಮತದಾನಕ್ಕೆ ಆಹ್ವಾನಿಸಲಾಗಿದೆ.

ಮತದಾನದ ಮಮತೆಯ ಕರೆಯೋಲೆ, ದಿನಾಂಕ: 26—04—2024 ರಂದು. ಮುಹೂರ್ತ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಎಂದು ಜಿಲ್ಲಾ ಸ್ವೀಪ್ ಸಮಿತಿ ವಿಶಿಷ್ಟ ಆಮಂತ್ರಣ ಪತ್ರಿಕೆ ನೀಡಿದೆ.

ಈ ಬ್ಯಾನರ್ ನಲ್ಲಿ ಮತದಾನಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಮತದಾರರನ್ನು ಸೆಳೆಯಲು ಜಿಲ್ಲಾಡಳಿಯದ ಪ್ರಯತ್ನ ಶ್ಲಾಘನೀಯ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ