ವಯನಾಡಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಚಿಕಿತ್ಸೆ ನೀಡಿ ಏಕಾಂಗಿ ಸಾಹಸ ಮೆರೆದ ನರ್ಸ್

ವಯನಾಡು ಭೂಕುಸಿತದ ಮೊದಲ ದಿನ ಮುಂಡಕ್ಕೈ ಮತ್ತು ಚುರುಮಲಗಳ ನಡುವೆ ಸಂಪರ್ಕ ಕಡಿದು ಹೋಗಿತ್ತು. ಇವುಗಳನ್ನು ನಡುವೆ ಸಂಪರ್ಕಿಸುತ್ತಿದ್ದ ಸೇತುವೆಯೇ ಭೂಕುಸಿತದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇಂತಹ ಸಂದರ್ಭದಲ್ಲಿ ಮುಂಡ ಕೈಗೆ ಯಾರಿಗೂ ಹೋಗಲು ಸಾಧ್ಯವಿಲ್ಲದಂತಹ ಸ್ಥಿತಿ ಏರ್ಪಾಡಾಗಿತ್ತು. ಈ ಸಂದರ್ಭದಲ್ಲಿ ಮುಂಡ ಕೈ ಪ್ರದೇಶದಲ್ಲಿ ಗಾಯಗೊಂಡಿರಬಹುದಾದ ಜನರಿಗೆ ಚಿಕಿತ್ಸೆ ಕೊಡುವುದಕ್ಕಾಗಿ ಸಬೀನಾ ಎಂಬ ನರ್ಸ್ ತೋರಿದ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಡಕ್ಕೈ ಮತ್ತು ಚುರುಮಲವನ್ನು ಸಂಪರ್ಕಿಸುವ ಸೇತುವೆ ಕುಸಿದು ಹೋಗಿರುವುದರಿಂದ ಹಗ್ಗವನ್ನು ಬಳಸಿ ಸಿಪ್ ಲೈನ್ ನನ್ನು ಸಿದ್ಧಪಡಿಸಲಾಗಿತ್ತು. ಮುಂಡಕೈಯಲ್ಲಿ ಜೀವಂತ ಉಳಿದಿರಬಹುದಾದವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಆ ಕಡೆಗೆ ಹೋಗುವ ಪುರುಷ ನರ್ಸ್ ಗಳನ್ನು ಹುಡುಕಲಾಗುತ್ತಿತ್ತು. ಮಾತ್ರವಲ್ಲ, ಈ ಕುರಿತಂತೆ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಪುರುಷರು ಯಾರೂ ಸಿಗಲಿಲ್ಲ. ಆದರೆ ಮಹಿಳಾ ನರ್ಸ್ ಆ ಕಡೆಗೆ ಹಗ್ಗದಲ್ಲಿ ನೇತಾಡಿಕೊಂಡು ಹೋಗುವುದು ಕಷ್ಟಕರ ಎಂಬ ನೆಲೆಯಲ್ಲಿ ಮಹಿಳೆಯರು ಬೇಡ ಎಂದು ಕೂಡ ಘೋಷಿಸಲಾಗಿತ್ತು. ಆದರೆ ಸಬೀನಾ ತಾನು ಹೋಗುವುದಾಗಿ ಹೇಳಿದರು. ಮಾತ್ರವಲ್ಲ ಹಗ್ಗದಲ್ಲಿ ನೇತಾಡಿ ಮುಂಡಕೈ ತಲುಪಿದ್ದಲ್ಲದೆ 35 ಮಂದಿಗೆ ಚಿಕಿತ್ಸೆ ನೀಡಿದರು. ಸಬೀನಾ ಅವರು ತೋರಿದ ಧೈರ್ಯ ಉಳಿದವರಿಗೂ ನೆರವಾಯಿತು. ಬಳಿಕ ಪುರುಷ ನರ್ಸುಗಳು ಕೂಡ ಸಿಪ್ ಲೈನ್ ಉಪಯೋಗಿಸಿ ಆ ಕಡೆಗೆ ಹೋದರಲ್ಲದೆ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದರು. ಸಬೀನಾರನ್ನು ಜಿಲ್ಲಾಡಳಿತವು ಸನ್ಮಾನಿಸಿದೆ. ಇವರ ಮಗಳು ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth