ಗೋಮಾಂಸ ತಿನ್ನುವವರ ಜೊತೆಗೆ ನಾವು ಡಿ ಎನ್ ಎ ಹಂಚಿಕೊಳ್ಳುವುದಿಲ್ಲ | ವಿಎಚ್ ಪಿ ಸದಸ್ಯೆ ಸಾಧ್ವಿ ಪ್ರಾಚಿ - Mahanayaka
8:44 PM Monday 15 - September 2025

ಗೋಮಾಂಸ ತಿನ್ನುವವರ ಜೊತೆಗೆ ನಾವು ಡಿ ಎನ್ ಎ ಹಂಚಿಕೊಳ್ಳುವುದಿಲ್ಲ | ವಿಎಚ್ ಪಿ ಸದಸ್ಯೆ ಸಾಧ್ವಿ ಪ್ರಾಚಿ

sadhvi prachi
10/07/2021

ಜೈಪುರ: ಎಲ್ಲ ಭಾರತೀಯರೂ ಧರ್ಮವನ್ನು  ಲೆಕ್ಕಿಸದೇ ತಮ್ಮ ಡಿಎನ್ ಎ ಹಂಚಿಕೊಳ್ಳುತ್ತಾರೆ ಎನ್ನುವ ಆರೆಸ್ಸೆಸ್ ಮುಖ್ಯಸ್ಥ  ಮೋಹನ್ ಭಾಗವತ್ ಅವರ ಹೇಳಿಕೆಗೆ ವಿ ಎಚ್ ಪಿ ಮುಖಂಡೆ ಸಾಧ್ವಿ ಪ್ರಾಚಿ ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.


Provided by

ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಧ್ವಿ ಪ್ರಾಚಿ, ಗೋಮಾಂಸ ತಿನ್ನುವವರ ಡಿಎನ್ ಎ ಹಿಂದೂಗಳಲ್ಲಿ ಕಂಡು ಬರುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದರು.

ಬಹುಶಃ ಭಾರತದ ಜನರು ಒಂದೇ ಡಿಎನ್‌ ಎ ಹಂಚಿಕೊಳ್ಳಬಹುದು. ಆದರೆ ಗೋ ಮಾಂಸವನ್ನು ತಿನ್ನುವವರ ಡಿಎನ್‌ ಎ ನಮ್ಮ ನಡುವೆ ಎಂದಿಗೂ ಕಂಡುಬರುವುದಿಲ್ಲ ಎಂದು ಸಾಧ್ವಿ ಹೇಳಿದರು.

ಜನಸಂಖ್ಯೆ ನಿಯಂತ್ರಣ ಮತ್ತು 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಸಂಸತ್ತಿನಲ್ಲಿ ಕಾನೂನು ಜಾರಿಗೆ ತರಬೇಕು ಮತ್ತು ಮತದಾನದ ಹಕ್ಕನ್ನು ಸಹ ಕಸಿದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನೀವು ಎಷ್ಟು ಹೆಂಡತಿಯರನ್ನು ಹೊಂದಿದ್ದೀರಿ ಎಂಬುದು ಮುಖ್ಯವಲ್ಲ, ಇಬ್ಬರು ಮಕ್ಕಳು ಮಾತ್ರ ಇರಬೇಕು ಎಂದ ಅವರು, ಲವ್ ಜಿಹಾದ್ ವಿಚಾರವನ್ನೂ ಪ್ರಸ್ತಾಪಿಸಿ,  ರಾಜಸ್ಥಾನದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ, ಹುಡುಗಿಯರನ್ನು ಮೋಸಗೊಳಿಸಲಾಗುತ್ತದೆ ಮತ್ತು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇತ್ತೀಚಿನ ಸುದ್ದಿ