ಹಿಂದಿನಂತೆಯೇ ಮುಂದೆಯೂ ನಿಮ್ಮನ್ನೇ ಬೆಂಬಲಿಸುತ್ತೇವೆ: ಜಗದೀಶ್ ಶೆಟ್ಟರ್ ಗೆ ವೀರಶೈವ ಲಿಂಗಾಯತ ಮುಖಂಡರಿಂದ  ಅಭಯ - Mahanayaka
12:07 AM Monday 15 - December 2025

ಹಿಂದಿನಂತೆಯೇ ಮುಂದೆಯೂ ನಿಮ್ಮನ್ನೇ ಬೆಂಬಲಿಸುತ್ತೇವೆ: ಜಗದೀಶ್ ಶೆಟ್ಟರ್ ಗೆ ವೀರಶೈವ ಲಿಂಗಾಯತ ಮುಖಂಡರಿಂದ  ಅಭಯ

jagadish shettar
01/05/2023

ಯಡಿಯೂರಪ್ಪನವರು ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಕೂಡ ಸಭೆ ನಡೆಸಿದ್ದು, ಈ ಹಿಂದೆ ಹೇಗೆ ಶೆಟ್ಟರ್ ಅವರನ್ನು ಬೆಂಬಲಿಸಿದ್ದೇವೋ ಅದೇ ರೀತಿಯಲ್ಲಿ ಬೆಂಬಲಿಸುವುದಾಗಿ ಮುಖಂಡರು ತಿಳಿಸಿದ್ದಾರೆನ್ನಲಾಗಿದೆ.

ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸಿದ್ದಾರೆ. ಸಭೆಯಲ್ಲಿ, ಬಿಜೆಪಿಯಲ್ಲಿ ತನಗೆ ಆದ ಅವಮಾನಗಳನ್ನು ಜಗದೀಶ್ ಶೆಟ್ಟರ್ ಅವರು ತೆರೆದಿಟ್ಟಿದ್ದು, ತಾನು ಕಾಂಗ್ರೆಸ್ ಗೆ ಯಾಕೆ ಸೇರ್ಪಡೆಯಾಗಬೇಕಾಯ್ತು ಎನ್ನುವುದನ್ನು ಜಗದೀಶ್ ಶೆಟ್ಟರ್ ವಿವರಿಸಿದ್ದಾರೆ.

ಇನ್ನೂ ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸುವುದಾಗಿ ಸಭೆಯಲ್ಲಿದ್ದ ಎಲ್ಲ ಮುಖಂಡರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಈ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ತಂಡಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಪ್ರಯತ್ನದಲ್ಲಿ ಭಾರೀ ಹಿನ್ನಡೆಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ