ಪಂಜಾಬ್‌ನ ಖ್ಯಾತ ಗಾಯಕ ಸಿಧು ಆಯಿತು, ಇನ್ಮುಂದೆ ನಮ್ಮ ಟಾರ್ಗೆಟ್ ಸಲ್ಮಾನ್ ಖಾನ್: ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ನಿಂದ ಕೊಲೆ ಬೆದರಿಕೆ - Mahanayaka

ಪಂಜಾಬ್‌ನ ಖ್ಯಾತ ಗಾಯಕ ಸಿಧು ಆಯಿತು, ಇನ್ಮುಂದೆ ನಮ್ಮ ಟಾರ್ಗೆಟ್ ಸಲ್ಮಾನ್ ಖಾನ್: ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ನಿಂದ ಕೊಲೆ ಬೆದರಿಕೆ

27/06/2023


Provided by

ಇತ್ತೀಚಿಗೆ ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸೆವಾಲರನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಇನ್ಮುಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಮುಂದಿನ ಗುರಿ ಎಂದು ಹೇಳಿಕೊಂಡಿದ್ದಾನೆ. ಈ ಮೂಲಕ ಮತ್ತೊಮ್ಮೆ ಸಲ್ಮಾನ್‌ಗೆ ನೇರವಾಗಿ ಕೊಲೆ ಬೆದರಿಕೆ ಹಾಕಿದ್ದಾನೆ.
ವೈಯಕ್ತಿಕ ಕಾರಣಗಳಿಂದ ಸಿಧುವನ್ನು ಕೊಲೆ ಮಾಡಿರುವುದಾಗಿ ಹೇಳಿರುವ ಗೋಲ್ಡಿ ಬ್ರಾರ್ ಸದ್ಯ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಗೋಲ್ಡಿ ಬ್ರಾರ್, ಸಲ್ಮಾನ್‌ಗೆ ಇ-ಮೇಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದ. ಹೀಗಾಗಿ ನಟ ಸಲ್ಮಾನ್ ಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರು. ತಮಗೂ ಗೋಲ್ಡಿ ಬ್ರಾರ್ ನಿಂದ ಹತ್ಯೆ ಬೆದರಿಕೆ ಬಂದಿದೆ ಎಂದು ಗಾಯಕ ಯೋ ಯೋ ಹನಿಸಿಂಗ್ ಇತ್ತೀಚೆಗೆ ದೂರು ದಾಖಲಿಸಿದ್ದರು.
‘ಸಲ್ಮಾನ್ ನಮ್ಮ ಮುಂದಿನ ಗುರಿ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೇ ನಾವು ಜೀವಂತವಾಗಿರುವವರೆಗೂ ನಮ್ಮೆಲ್ಲ ಶತ್ರುಗಳನ್ನು ಸಾಯಿಸುವ ಪ್ರಯತ್ನ ಮುಂದುವರೆಸುತ್ತೇವೆ’ ಎಂದು ಗೋಲ್ಡಿ ಬ್ರಾರ್ ಹೇಳಿದ್ದಾನೆ. ಕೃಷ್ಣಮೃಗವನ್ನು ಬೇಟೆಯಾಡುವ ಮೂಲಕ ಬಿಷ್ಣೋಯ್ ಸಮುದಾಯದ ಭಾವನೆಗೆ ಸಲ್ಮಾನ್‌ ಧಕ್ಕೆ ಉಂಟು ಮಾಡಿದ್ದಾರೆಂದು ಬೆದರಿಕೆ ಹಾಕಿದ ಗೋಲ್ಡಿ ಬ್ರಾರ್ ಸಹಚರರಾದ ಲಾರೆನ್ಸ್‌ ಬಿಜೋಯ್ ಮತ್ತು ರೋಹಿತ್ ವಿರುದ್ಧ ಪ್ರಕರಣ ದಾಖಲಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ