ರಣರಂಗದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ!: ಇದು ಚಾರ್ಮಾಡಿ ಘಾಟ್ ಚರಂಡಿಗಳ ಕಥೆ
ಕೊಟ್ಟಿಗೆಹಾರ: ಮಳೆಗಾಲ ಆರಂಭವಾದರೂ ಚಾರ್ಮಾಡಿ ಘಾಟಿಯಲ್ಲಿ ಚರಂಡಿ ವ್ಯವಸ್ಥೆ ಕಾರ್ಯ ಮಾಡದೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ 2020ರಲ್ಲಿ ಮಳೆಗಾಲಕ್ಕೂ ಮುನ್ನ ಚರಂಡಿ ವ್ಯವಸ್ಥೆ ಮಾಡದೇ ಭೂಕುಸಿತ ಉಂಟಾಗಿ ಅವಘಡವೇ ನಡೆದು ಹೋಗಿತ್ತು. ಆದರೆ ಮಳೆಗಾಲ ಆರಂಭವಾಗುವ ಮೊದಲು ನಾವು ಎಚ್ಚರವಾಗಿ ಮುಂಜಾಗೂಕತೆಯ ಕ್ರಮ ವಹಿಸಿದ್ದರೆ, ಅಂದು ರಸ್ತೆಯ ಮೇಲೆ ನೀರು ನುಗ್ಗಿ ಭೂಕುಸಿತ ಸಂಭವಿಸುತ್ತಿರಲಿಲ್ಲ.
ಆದರೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮೇ ಕೊನೆಯ ವಾರದಲ್ಲೇ ಚರಂಡಿ ಬಿಡಿಸುವ ಕೆಲಸ ಮಾಡಬೇಕಿತ್ತು ಆದರೆ ಮಳೆ ಆರಂಭವಾಗಿ ಎರಡು ತಿಂಗಳು ಕಳೆದರೂ ಚರಂಡಿ ಬಿಡಿಸುವ ಕಾರ್ಯ ಮಾಡದೇ ಸುಮ್ಮನಿರುವುದು ಅಧಿಕಾರಿಯ ನಿರ್ಲಕ್ಷ್ಯದ ಕೈಗನ್ನಡಿಯಾಗಿದೆ.
ಜುಲೈ ತಿಂಗಳಿನಲ್ಲಿ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಚಾರ್ಮಾಡಿ ಘಾಟಿನಲ್ಲಿ ಚರಂಡಿ ಬಿಡಿಸುವ ಕೆಲಸ ಮಾಡುತ್ತಿದೆ. ಇದು ಯುದ್ದ ಕಾಲ ಆರಂಭವಾದ ಮೇಲೆ ಶಸ್ತ್ರಾಸ್ತ್ರ ಅಭ್ಯಾಸ ಮಾಡಿದಂತಾಗಿದೆ ಎಂದು ತೀವ್ರ ಟೀಕೆಗೆ ಕಾರಣವಾಗಿದೆ. ಇನ್ನಾದರೂ ಎನ್.ಎಚ್ ಅಧಿಕಾರಿಗಳು ಪರಿಸರ ಹಾಗೂ ಜನರ ಪ್ರಾಣ ಉಳಿಸುತ್ತ ಅಪಾಯ ಸಂಭವಿಸುವ ಮೊದಲೇ ಎಚ್ಚರ ವಹಿಸಬೇಕು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























