ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಮೇಲೆ ಎಲ್ಲರ ಕಣ್ಣು: ಘರ್ಷಣೆ ಮಧ್ಯೆ ಮತದಾನ ಆರಂಭ
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆಯಲಿರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಯಾಕೆಂದರೆ ಇದು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಮನಸ್ಥಿತಿಯ ಒಂದು ರೂಪವನ್ನು ಎತ್ತಿ ಹಿಡಿಯಲಿದೆ. ರಾಜ್ಯದ ರಾಜಕೀಯ ಬದಲಾವಣೆಯನ್ನು ಸೂಚಿಸುವ ಸಾಧ್ಯತೆ ಇದೆ.
ಇಲ್ಲಿನ 22 ಜಿಲ್ಲಾ ಮಂಡಳಿಗಳಲ್ಲಿ ಸುಮಾರು 928 ಸ್ಥಾನಗಳು, ಬ್ಲಾಕ್ ಕೌನ್ಸಿಲ್ ಗಳಲ್ಲಿ 9,730 ಸ್ಥಾನಗಳು ಮತ್ತು ಗ್ರಾಮ ಮಂಡಳಿಗಳಲ್ಲಿ 63,229 ಸ್ಥಾನಗಳನ್ನು ಒಳಗೊಂಡಿರುವ ಚುನಾವಣೆಯಲ್ಲಿ ಸುಮಾರು 5.67 ಕೋಟಿ ಮತದಾರರು ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಜುಲೈ 11 ರಂದು ಮತ ಎಣಿಕೆ ನಡೆಯಲಿದೆ.
ಜೂನ್ 8 ರಂದು ಮತದಾನದ ದಿನಾಂಕಗಳನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ನಡೆದವು. ಅಪ್ರಾಪ್ತ ವಯಸ್ಕ ಸೇರಿದಂತೆ ಒಂದು ಡಜನ್ ಗೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಡಳಿತಾರೂಢ ಟಿಎಂಸಿ ಪಕ್ಷವು ಶಾಂತಿ ಮತ್ತು ಪ್ರಜಾಪ್ರಭುತ್ವದ ಆಧಾರದ ಮೇಲೆ ಚುನಾವಣಾ ಪ್ರಚಾರ ನಡೆಸಿತು. ಅಲ್ಲದೇ ಬಲಪ್ರಯೋಗದಿಂದ ದೂರವಿರಲು ತನ್ನ ಕಾರ್ಯಕರ್ತರನ್ನು ಒತ್ತಾಯಿಸಿತು.
ಇತ್ತ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿಷಯಗಳ ಬಗ್ಗೆ ಬಿಜೆಪಿ ಪ್ರಚಾರ ನಡೆಸಿತು. ಕಾಂಗ್ರೆಸ್ ಮತ್ತು ಸಿಪಿಐ (ಎಂ) ಕೂಡ ತಮ್ಮ ಭರವಸೆಗಳೊಂದಿಗೆ ಮತದಾರರನ್ನು ಸೆಳೆಯಲು ಪ್ರಯತ್ನಿಸಿದವು. ಉತ್ತರ ಮತ್ತು ದಕ್ಷಿಣದ ಕೆಲವು ಭಾಗಗಳಲ್ಲಿ ಸೀಮಿತ ಉಪಸ್ಥಿತಿಯನ್ನು ಹೊಂದಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಕೂಡ ಚುನಾವಣಾ ಪ್ರಚಾರ ಕೂಡ ನಡೆಸಿತ್ತು.
ಇಂದಿನ ಮತದಾನದ ದಿನದಂದು ಮಾಣಿಕ್ ಚಕ್ ನಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw



























